ಶಿಕ್ಷಣ

ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ : ವಾರ್ಷಿಕ ಕ್ರೀಡಾಕೂಟ 

Views: 91

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಮಾಬುಕಳ- ಹಂಗಾರಕಟ್ಟೆಯ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಇದರ ವಾರ್ಷಿಕ ಕ್ರೀಡಾಕೂಟ ಮೇ. 2 ರಂದು ಶುಕ್ರವಾರ ನಡೆಯಿತು. 

ಕ್ರೀಡಾಕೂಟವನ್ನು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಸ್ರೂರು ರಾಜೀವ ಶೆಟ್ಟಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡಾ ಮನೋಭಾವನೆ ಮೂಲಕ ಪರಿಶ್ರಮ, ಶಿಸ್ತು, ಸ್ವಯಂ ನಿಯಂತ್ರಣ ಮತ್ತು ನಮೃತೆಯಂತಹ ವ್ಯಕ್ತಿತ್ವ ಬೆಳವಣಿಗೆಯಾಗಿ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಸಾಧ್ಯ ಎಂದರು. 

 ಉಡುಪಿ ಹಂಸ ಚೈತನ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷರಾದ ಶ್ರೀ ಸುದೀಪ್ ನಾಯಕ್ ಕ್ರೀಡಾ ಜ್ಯೋತಿಯನ್ನು ಉದ್ಘಾಟಿಸಿ, ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು- ಗೆಲುವು ಸಮನಾಗಿ ಕಾಣಬಹುದು. ಇತರರನ್ನು ಗೌರವ ಮತ್ತು ದಯೆಯಿಂದ ನಡೆಸಿ ಕೊಳ್ಳುವುದರ ಮೂಲಕ ಸಕರಾತ್ಮಕ ಸಂಬಂಧಗಳನ್ನು ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಯಾಗಿ ಸಮಾಜಕ್ಕೆ ಕೀರ್ತಿ ತರಬಹುದು ಎಂದರು. 

ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೊಸೈಟಿ (ರಿ) ಮಾಬುಕಳ ಇದರ ಅಧ್ಯಕ್ಷರಾದ ಬಿ ಭರತ್ ಶೆಟ್ಟಿ ಧ್ವಜಾರೋಹಣಗೈದರು.

ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಬ್ರಹ್ಮಾವರ ಅಧ್ಯಕ್ಷರಾದ ತಾರಾನಾಥ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕಲ್ಪನಾ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಟ್ರಸ್ಟಿಗಳಾದ ಸುಜಾತ ತಾರಾನಾಥ ಶೆಟ್ಟಿ, ವೀಣಾ ಎಸ್ ಶೆಟ್ಟಿ, ಉಪಸ್ಥಿತರಿದ್ದರು. 

ಉಪನ್ಯಾಸಕಿ ಮಿಲನ್ ಸ್ವಾಗತಿಸಿದರು, ಕಾಲೇಜಿನ ಪ್ರಾಂಶುಪಾಲೆ ಸ್ಮಿತಾ ಮೋಲ್ ಇಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ವಿನೋದ ಕ್ರೀಡಾ ಪ್ರತಿಜ್ಞೆ ವಾಚಿಸಿದರು. ಹಂಗಾರಕಟ್ಟೆ ಚೇತನ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಹರ್ಷವರ್ಧನ್ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು. ಪ್ರೀತಿಕಾ ವಂದಿಸಿದರು.

Related Articles

Back to top button
error: Content is protected !!