ಪ್ರಿಯತಮೆಯನ್ನು ಕೊಂದು ಶವವನ್ನು ಜಮೀನಿನಲ್ಲಿ ಬಚ್ಚಿಟ್ಟು,ಆಕೆಯ ಒಡವೆಗಳನ್ನು ದೋಚಿದ ಪ್ರಿಯಕರ

Views: 156
ಕನ್ನಡ ಕರಾವಳಿ ಸುದ್ದಿ: ಇನ್ ಸ್ಟಾಗ್ರಾಂ ಮೂಲಕ ಪರಿಚಿತಳಾದ ವಿವಾಹಿತೆಯ ಪ್ರೇಮಕ್ಕೆ ಬಿದ್ದ ಯುವಕ ಆಕೆಯೊಂದಿಗೆ ಸುತ್ತಾಟ ನಡೆಸಿ ಚಿನ್ನಾಭರಣಗಳನ್ನು ದೋಚಿ, ಆಕೆಯನ್ನು ಹತ್ಯೆಗೈದು ಶವವನ್ನು ಬಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ 35 ವರ್ಷದ ಮಹಿಳೆ ಪ್ರೀತಿಯನ್ನು ಕರೋಟಿ ಗ್ರಾಮದ ಪುನೀತ್ ಎಂಬಾತ ಹತ್ಯೆಗೈದು, ಆಕೆಯ ಶವವನ್ನು ತನ್ನದೇ ಜಮೀನಿನಲ್ಲಿ ಬಚ್ಚಿಟ್ಟಿದ್ದ.
ಪುನೀತ್ ಹಾಗೂ ಪ್ರೀತಿ ಇನ್ ಸ್ಟಾ ಗ್ರಾಂನಲ್ಲಿ ಪರಿಚಿಯವಾಗಿದ್ದಾರೆ. ಪ್ರೀತಿಗೆ ಪತಿ ಇಬ್ಬರು ಮಕ್ಕಳು ಇದ್ದಾರೆ. ಆದಾಗ್ಯೂ ಕೆಲವೇ ದಿನಗಳ ಹಿಂದಷ್ಟೇ ಪರಿಚಿತನಾದ ಯುವಕನ ಪ್ರೇಮಪಾಶಕ್ಕೆ ಸಿಲುಕಿದ್ದ ಪ್ರೀತಿ, ಪುನೀತ್ ಜೊತೆ ಹತ್ತು ದಿನಗಳ ಕಾಲ ಸುತ್ತಾಡಿದ್ದಾಳೆ. ಕಳೆದ ವಾರ ಇಬ್ಬರೂ ಮೈಸೂರು, ಮಂಡ್ಯ ಪ್ರವಾಸಿ ತಾಣಗಳಲ್ಲಿ ಕಾರಿನಲ್ಲಿ ಓಡಾಡಿದ್ದಾರೆ. ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಅದೇ ಸ್ಥಳದಲ್ಲಿ ಪ್ರೀತಿಯನ್ನು ಹತ್ಯೆಗೈದ ಪುನೀತ್, ಆಕೆಯ ಒಡವೆಗಳನ್ನು ದೋಚಿದ್ದಾನೆ
ಬಳಿಕ ಶವವನ್ನು ತಂದು ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದಾನೆ. ಪ್ರೀತಿಯ ಮೊಬೈಲ್ ಗೆ ಕರೆಯೊಂದು ಬಂದಿತ್ತು. ಫೋನ್ ಸ್ವೀಕರಿಸದಿದ್ದಾಗ ಅನುಮಾನ ಆರಂಭವಾಗಿದೆ. ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಪುನಿತ್ ನನ್ನು ಬಂಧಿಸಿದ್ದಾರೆ.