ಇತರೆ

ಪೊಲೀಸ್ ಅಧಿಕಾರಿ ಮೇಲೆ ಕೈಎತ್ತಿದ ಸಿದ್ದರಾಮಯ್ಯ, ಸ್ವಯಂ ನಿವೃತ್ತಿಗೆ ಮುಂದಾದ ಪೊಲೀಸ್ ಅಧಿಕಾರಿ!

Views: 338

ಕನ್ನಡ ಕರಾವಳಿ ಸುದ್ದಿ, ಬೆಳಗಾವಿ: ಬೆಳಗಾವಿ ಸಮಾರಂಭವೊಂದಲ್ಲಿ ತಮ್ಮ ಮೇಲೆ ಸಿಎಂ ಕೈ ಎತ್ತಿದ ಸನ್ನಿವೇಶದಿಂದ ಮನನೊಂದ ಧಾರವಾಡ ಎಎಸ್‌ಪಿ ನಾರಾಯಣ ಬರಮನಿ ಅವರು ಸ್ವಯಂ ನಿವೃತ್ತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಧಾರವಾಡ ಎಎಸ್‌ಪಿ ಅಗಿರುವ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸ್ವಯಂಪ್ರೇರಿತ ನಿವೃತ್ತಿಗೆ ಬರಮನಿ ಅವರು ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಸಿಎಂ ಸಮ್ಮುಖದಲ್ಲಿ ಅಧಿಕಾರಿಯ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಆದರೆ ತಮಗಾದ ಅವಮಾನಕ್ಕೆ ನೊಂದುಕೊಂಡಿದ್ದರು. ಹೀಗಾಗಿ, ಕೆಲಸದಿಂದಲೇ ಸ್ವಯಂ ನಿವೃತ್ತಿಗೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.

Related Articles

Back to top button