ಇತರೆ

ಪೊಲೀಸರ ಸೋಗಿನಲ್ಲಿ ಕಂಟ್ರ್ಯಾಕ್ಟರ್‌ಗೆ ಹನಿಟ್ರ್ಯಾಪ್ ನಯನಾ ಸೇರಿ 4 ಜನರ ಬಂಧನ

Views: 341

ಕನ್ನಡ ಕರಾವಳಿ ಸುದ್ದಿ: ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಯನಾ ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಯನಾ, ಅಜಯ್, ಸಂತೋಷ್, ಜಯರಾಜ್ ಬಂಧಿತರು. ಪ್ರಕರಣ ದಾಖಲಾದಾಗಿನಿಂದ ಕಿಂಗ್ ಪಿನ್ ನಯನಾ ಬೆಂಗಳೂರಿನ ವಿವಿಧೆಡೆಗಳಲ್ಲಿ ತಲೆಮರೆಸಿಕೊಂಡಿದ್ದಳು. ಇದೀಗ ನಯನಾ ಸೇರಿ ನಾಲ್ವರು ಅರೆಸ್ಟ್ ಆಗಿದ್ದಾರೆ.

ನಯನಾ ತನ್ನ ಸ್ನೇಹಿತನ ಮೂಲಕ 57 ವರ್ಷದ ಸಿವಿಲ್ ಕಂಟ್ರ್ಯಾಕ್ಟರ್ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಆರ್ಥಿಕ ಸಂಕಷ್ಟ, ಸಮಸ್ಯೆ ಇದೆ ಎಂದು ಆಗಾಗ ಐದು-ಹತ್ತು ಸಾವಿರ ಹಣ ಪಡೆದಿದ್ದಾಳೆ. ಮಾಗಡಿ ರಸ್ತೆಯಲ್ಲಿ ಹೋಗುವಾಗ ಸಿವಿಲ್ ಕಾಂಟ್ರ್ಯಾಕ್ಟರ್ ನೆರವಾಗಿ ಸಿಗುತ್ತಿದ್ದಂತೆ ಇಲ್ಲೇ ಮನೆಯಿದೆ ಟೀ ಕುಡಿದುಕೊಂಡು ಹೋಗಿ ಎಂದು ಆತನನ್ನು ಮನೆಗೆ ಕರೆದಿದ್ದಾಳೆ.

ಆಕೆಯ ಮನೆಯೊಳಗೆ ಕಾಂಟ್ರ್ಯಾಕ್ಟರ್ ಹೋಗಿದ್ದ ವೇಳೆ ಪೊಲೀಸರ ಸೋಗಿನಲ್ಲಿ ಮೂವರು ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಬ್ಲ್ಯಾಕ್ ಮೇಲ್ ಮೇಲ್ ಮಾಡಿ, ಹಲ್ಲೆ ನಡೆಸಿ, ಬಟ್ಟೆ ಬಿಚ್ಚಿಸಿ ಫೋಟೋ ತೆಗೆದುಕೊಂಡಿದ್ದಾರೆ. ಕೆಳಗಡೆ ಮೇಡಂ ನಿಂತಿದ್ದಾರೆ ಇಲ್ಲೇ ಸೆಟಲ್ ಮಾಡಬೇಕು ಎಂದು ವ್ಯಕ್ತಿಗೆ ಬೆದರಿಸಿ 29 ಸಾವಿರ ನಗದು, 26ಸಾವಿರ ಫೋನ್ ಪೇ, ಮೈಮೇಲೆ ಇದ್ದ 5 ಲಕ್ಷ ರೂನಷ್ಟು ಚಿನ್ನದ ಸರ, ಉಂಗುರ, ಬ್ರಾಸ್ ಲೈಟ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.ಈ ವೇಳೆ ಕಂಟ್ರ್ಯಾಕ್ಟರ್ ನಯನಾಗೆ ಬನ್ನಿ ಪೊಲೀಸ್ ಕಂಪ್ಲೇಂಟ್ ಕೊಡೋಣ ಎಂದು ಹೇಳಿದರೆ ಆಕೆ ಹೊಸ ಡ್ರಾಮಾ ಶುರು ಮಾಡಿದ್ದಾಳೆ.

ಪೊಲೀಸರು, ಸ್ಟೇಷನ್ ಅಂತಾ ಹೋದರೆ ನನ್ನ ಮಗುನ ಕರೆದುಕೊಂಡು ನಿಮ್ಮ ಮನೆಗೆ ಬರ್ತೀನಿ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಘಟನೆ ಬಳಿಕ ಕಾಂಟ್ರ್ಯಾಕ್ಟರ್ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು  ಯುವತಿ ನಯನಾ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

Related Articles

Back to top button