ಇತರೆ

ಪಂಚರ್ ಆದ ಕಾರಿನ ಟೈರ್ ಚೇಂಜ್ ಮಾಡುವಾಗ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ: ಇಬ್ಬರು ಸಾವು

Views: 44

ತುಮಕೂರು: ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೆಂಗಳೂರಿನ ಆವಲಹಳ್ಳಿ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕಿನ ಕುಂಟೇಗೌಡನಹಳ್ಳಿ ಗೇಟ್ ಬಳಿ ನಡೆದಿದೆ.

ನಗರದ ಆವಲಹಳ್ಳಿ ಮೂಲದ ಮಹೇಶ್ (38) ಹಾಗೂ ಉಮೇಶ್ (40) ಮೃತ ದುರ್ದೈವಿಗಳು. ಇವರು ಬೆಂಗಳೂರಿನಿಂದ ಶಿರಾ ಕಡೆಗೆ ತೆರಳುತ್ತಿದ್ದರು. ಈ ವೇಳೆ ಕಾರು ಪಂಚರ್ ಆಗಿದ್ದರಿಂದ ಟೈರ್​ ಅನ್ನು ಬದಲಿಸುತ್ತಿದ್ದರು. ಆಗ ಹಿಂಬಂದಿಯಿಂದ ಬಂದ ಅಪರಿಚಿತವಾಹನವೊಂದು ಡಿಕ್ಕಿಯಾಗಿದೆ.

ಪರಿಣಾಮ ಸ್ಥಳದಲ್ಲೇ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಎರಡು ಮೃತದೇಹಗಳನ್ನ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button