ಸಾಮಾಜಿಕ
ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಮೃತದೇಹ ಪತ್ತೆ

Views: 192
ಕನ್ನಡ ಕರಾವಳಿ ಸುದ್ದಿ: ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಮಹಿಳೆಯ ಶವ ಫೆ. 20 ರಂದು ತೀರ್ಥಹಳ್ಳಿ ತಾಲೂಕಿನ ಬೆಟ್ಟಮಕ್ಕಿಯ ಮನೆಯೊಳಗೆ ಪತ್ತೆಯಾಗಿದೆ.
ಮೃತ ಯುವತಿಯನ್ನು ಶ್ರೀನಿಧಿ (24) ಎಂದು ಗುರುತಿಸಲಾಗಿದೆ.
ಇವರು ಮೂಲತ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಕುದುರುನಬೆಟ್ಟು ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ಬೆಟ್ಟಮಕ್ಕಿಯ ಸುದೀಪ್ ಶೆಟ್ಟಿ ಜತೆ ವಿವಾಹವಾಗಿದ್ದರು. “ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಕುಟುಂಬದವರಿಗೆ ತೊಂದರೆ ಯಾಗುತ್ತಿದೆ.”ಎಂಬ ಡೆತ್ ನೋಟ್ ಸಿಕ್ಕಿದ್ದು ಅದರ ಬಗ್ಗೆ ಸಮಗ್ರ ತನಿಖೆ ಸಾಗುತ್ತಿದೆ.
ಈ ಕುರಿತು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






