ಸಾಂಸ್ಕೃತಿಕ

“ನನ್ನ ಮಗನನ್ನು ಕೊಂದ ದರ್ಶನ್‌ಗೆ ಜೈಲಲ್ಲಿ  ರಾಜಾತಿಥ್ಯ ಕೊಟ್ಟವರಿಗೂ ಶಿಕ್ಷೆಯಾಗಲಿ” ರೇಣುಕಾಸ್ವಾಮಿ ತಂದೆ

Views: 91

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದುಹೋಗಿದೆ. ಇನ್ನೇನು 2-3  ವಾರಗಳಲ್ಲಿ ಡಿಗ್ಯಾಂಗ್ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದ್ದಾರೆ.

ಈ ಹೊತ್ತಲ್ಲಿ ದರ್ಶನ್ ಜೈಲೊಳಗೆ  ಸಿಗರೇಟ್,ಕಾಫಿ, ಸ್ಮೈಲ್ ಮತ್ತು ರೌಟಿಶೀಟರ್‌ ಜೊತೆ ಹರಟೆ..  ಮೋಜು ಮಸ್ತಿ ಮಾಡ್ತಿದ್ದಾರೆ ಎನ್ನಲಾದ ಶಾಕಿಂಗ್ ಫೋಟೋ ವೈರಲ್ ಆಗಿದೆ. ಸಿಗರೇಟ್ ಹೊಡ್ಕೊಂಡು, ಕಾಫಿ ಕುಡ್ಕೊಂಡು, ಇಬ್ಬರು ರೌಡಿ ಶೀಟರ್‌ಗಳ ಜೊತೆ ಕೂತು ಖಾಸ್‌ಬಾತ್ ನಡೆಸ್ತಿರೋ ಶಾಕಿಂಗ್ ಫೋಟೋ ದೊಡ್ಡ ಸಂಚಲನ ಸೃಷ್ಟಿಸಿದೆ. ಅಲ್ಲದೆ, ಜೈಲೊಳಗೆ ದರ್ಶನ್‌ಗೆ ರಾಜಾತಿಥ್ಯ ಸಿಗ್ತಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಮತ್ತೊಂದು ಕಡೆ ಮನೆ ಮಗನನ್ನು ಕಳ್ಕೊಂಡು ಶೋಕದಲ್ಲಿರೋ ರೇಣುಕಾಸ್ವಾಮಿ ಕುಟುಂಬಕ್ಕೆ ಈ ವಿಚಾರ ಆಘಾತ ತಂದಿದೆ. ನ್ಯಾಯ ಸಿಗೋ ನಿರೀಕ್ಷೆಯಲ್ಲಿರೋ ಸ್ವಾಮಿ ಹೆತ್ತವರಿಗೆ ದರ್ಶನ್ ಮೋಜು ಮಸ್ತಿಯ ಫೋಟೋ ಅದೆಂತಾ ನೋವು ತರಿಸಿದೆ ಅನ್ನೋದನ್ನ ಕಲ್ಪಿಸಿಕೊಳ್ಳೋಕೂ ಆಗಲ್ಲ.

ರೇಣುಕಾಸ್ವಾಮಿ ತಂದೆ ಬಾಯಲ್ಲಿ ಇದೇ ಮೊದಲ ಬಾರಿಗೆ ಸಿಬಿಐ ತನಿಖೆಯ ಕೋರಿಕೆ ಕೇಳಿಬಂದಿರೋದು ಆಶ್ಚರ್ಯವೇನಲ್ಲ. ಯಾಕಂದ್ರೆ, ಒಬ್ಬ ಕೊಲೆ ಆರೋಪಿಗೆ ಜೈಲಿನಲ್ಲಿ ಸಿಗರೇಟ್ ಸೇದುವ, ಬೇಕೆಂದವರ ಜೊತೆ ಹರಟೆ ಹೊಡೆಯೋ ಅವಕಾಶ ಸಿಗುತ್ತೆ ಅಂದ್ರೆ ನಿಜಕ್ಕೂ ಆಘಾತಕಾರಿ. ದರ್ಶನ್ ಕೇಸ್‌ನಲ್ಲಿ ಪೊಲೀಸರು ನಡೆದುಕೊಂಡಿರೋ ಮತ್ತು ನಡೆದುಕೊಳ್ತಿರೋ ರೀತಿಗೆ ಎಲ್ಲವೂ ಶಹಬ್ಬಾಶ್‌ ಎನ್ನುತ್ತಿದ್ದಾರೆ. ಆದ್ರೆ, ಜೈಲೊಳಗೆ ಮಾತ್ರ ದರ್ಶನ್‌ರನ್ನು ಸೆಲೆಬ್ರಿಟಿ ರೀತಿಯೇ ಟ್ರೀಟ್ ಮಾಡಲಾಗ್ತಿದ್ಯಾ ಎಂಬ ಪ್ರಶ್ನೆ ಹುಟ್ಟುವಂತಾ ಫೋಟೋ ವೈರಲ್ ಆಗಿದೆ.

ಜೈಲೊಳಗೆ ದರ್ಶನ್‌ ಬಿಂದಾಸ್‌ ಜಿಂದಗಿ ನಡೆಸ್ತಿರೋ ಅನುಮಾನ ಹುಟ್ಟಿಸುವಂತಾ ಫೋಟೋ ನೋಡಿ ಆಘಾತಕ್ಕೆ ಒಳಗಾಗಿದ್ದರೂ, ಮನದೊಳಗೆ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ಕೂಡ.. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ, ನಮ್ಮ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ. ರಾಜ್ಯ ಸರ್ಕಾರ, ರಾಜ್ಯ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯ ಕೊಡಿಸೋ ಭರವಸೆ ಇದೆ ಎಂಬ ಮಾತನ್ನಾಡಿದ್ದಾರೆ. ಅಷ್ಟೇ ಅಲ್ಲ. ಜೈಲಿನಲ್ಲಿ ದರ್ಶನ್‌ಗೆ ಇಂಥಾ ರಾಜಾತಿಥ್ಯ ನೀಡುತ್ತಿರೋದು ಸತ್ಯವೇ ಆಗಿದ್ದಾದ್ರೆ.. ಅದಕ್ಕೆ ಕಾರಣರಾದವರಿಗೆ ತನಿಖೆ ಮಾಡಿ ಶಿಕ್ಷೆ ನೀಡಲಿ ಅಂತಾ ಮೃತ ರೇಣುಕಾಸ್ವಾಮಿ ತಂದೆ ಮತ್ತು ಚಿಕ್ಕಪ್ಪ ಆಗ್ರಹಿಸಿದ್ದಾರೆ.

ಒಂದು ಕಡೆ ರೇಣುಕಾಸ್ವಾಮಿ ಹೆತ್ತವರ ಕಣ್ಣೀರು. ಮತ್ತೊಂದು ಕಡೆ ಜೈಲಲ್ಲೂ ಸಿಗರೇಟ್ ಹೊಡ್ಕೊಂಡು ಬಿಂದಾಸ್‌ ಲೈಫ್ ನಡೆಸ್ತಿರೋ ದರ್ಶನ್‌. ನಿಜಕ್ಕೂ ವಿಪರ್ಯಾಸ ಅನ್ನಿಸದೇ ಇರದು. ಬಟ್, ವೈರಲ್ ಆಗಿರೋ ಈ ಫೋಟೋಗೆ ಸಂಬಂಧಪಟ್ಟಂತೆ ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚವೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜೈಲಿನಲ್ಲಿ ಮೊಬೈಲ್ ಸಿಕ್ಕಿದ್ದು ಹೇಗೆ? ಫೋಟೋ ತೆಗೆದಿದ್ದು ಯಾರು? ದರ್ಶನ್‌ಗೆ ಸಿಗರೇಟ್ ಕೊಟ್ಟವರು ಯಾರು? ರೌಡಿಶೀಟರ್‌ಗಳ ಜೊತೆ ದರ್ಶನ್‌ ಅಷ್ಟು ಆಪ್ತವಾಗಿ, ಹರಟೆ ಹೊಡೆಯುತ್ತಾ ಮಾತನಾಡೋದಕ್ಕೆ ಅವಕಾಶ ಕೊಟ್ಟವರು ಯಾರು? ಹೀಗೆ, ಎಲ್ಲರನ್ನೂ ಕಾಡುತ್ತಿರೋ ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ಹಿರಿಯ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Related Articles

Back to top button