ಯುವಜನ
ತಾಯಿ ಎದುರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್ ಇಂಜಿನಿಯರ್!
Views: 244
ಕನ್ನಡ ಕರಾವಳಿ ಸುದ್ದಿ: ಯುವತಿಯೊಬ್ಬಳು ತಾಯಿ ಎದುರೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು ನಗರದ ರಾಮಕೃಷ್ಣನಗರದ ನಿವಾಸಿ ಕಾಳೇಗೌಡ ಅವರ ಪುತ್ರಿ 27 ವರ್ಷದ ಕುಸುಮಾಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕುಸುಮಾಂಜಲಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಅವರ ತಾಯಿ ತಿಳಿಸಿದ್ದಾರೆ.
ತಾಯಿ ವೀಣಾ ಅವರನ್ನು ಬೃಂದಾವನ ವೀಕ್ಷಿಸಲು ಹೋಗೋಣ ಎಂದು ಒತ್ತಾಯಿಸಿದ ಕುಸುಮಾಂಜಲಿ, ಸ್ಕೂಟರ್‌ನಲ್ಲಿ ಕೆ.ಆರ್. ಸಾಗರಕ್ಕೆ ಬಂದಿದ್ದರು. ಈ ವೇಳೆ ಹರಿಯುವ ನೀರಿನ ಬಳಿ ನಿಂತು ಫೋಟೊ ತೆಗೆದುಕೊಳ್ಳುವುದಾಗಿ ಹೇಳಿ, ಏಕಾಏಕಿ ತಾಯಿ ಕಣ್ಣೆದುರೇ ನದಿಗೆ ಹಾರಿದ್ದಾರೆ ಎನ್ನಲಾಗಿದೆ.






