ತನಿಖೆಯಿಂದ ಮತ್ತೊಂದು ಸ್ಪೋಟಕ ರಹಸ್ಯ ಬಯಲು..ಸೋನಂ ರಕ್ಷಿಸಲು ಬೇರೆ ಸ್ತ್ರೀ ಹತ್ಯೆಗೆ ಪ್ಲಾನ್!

Views: 189
ಕನ್ನಡ ಕರಾವಳಿ ಸುದ್ದಿ: ರಾಜಾ ರಘುವಂಶಿ ಹಂತಕರು ಯಾವುದೋ ಮಹಿಳೆಯನ್ನು ಕೊಂದು ದೇಹ ಸುಟ್ಟು ಬಳಿಕ ಇದು ಆತನ ಪತ್ನಿಯದು ಎಂದು ನಂಬಿಸಲು ಸಂಚು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಸತ್ಯ ಹೊರ ಬರುವವರೆಗೆ ಸೋನಂ ಇನ್ನಷ್ಟು ಅಡಗಿ ಕೊಳ್ಳಬಹುದು ಎಂದು ಎಣಿಸಿದ್ದರು.ಕೊಲೆ ಪ್ರಕರಣದಲ್ಲಿ ಸೋನಂ ಪ್ರಿಯಕರ ರಾಜ್ ಕುಶ್ವಾಹ್ ಸಂಚುಕೋರ, ಸೋನಂ ಸಹಸೂತ್ರಧಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಸೋನಂ, ರಾಜ್, ಇತರ ಮೂವರ ಮೊದಲ ದಿನ ವಿಚಾರಣೆ ಬಳಿಕ, ಮೇಘಾಲಯದಿಂದ ಬುರ್ಖಾ ಧರಿಸಿ ಮತ್ತು ಟ್ಯಾಕ್ಸಿ ಬಸ್, ಟೈನ್ ಬಳಸಿ ಮಧ್ಯಪ್ರದೇಶಕ್ಕೆ ಸೋನಂ ಪರಾರಿಯಗಿದ್ದು ಪತ್ತೆಯಾಗಿದೆ. ಮೇ 11ರಂದು ಸೋನಂ ಜತೆ ಮದುವೆಗೂ ಸ್ವಲ್ಪ ಮುಂಚೆಯೇ ರಾಜಾ ಹತ್ಯೆಗೆ ಸಂಚು ಹೆಣೆದಿದ್ದು ಈ ಸಂಚಿಗೆ ಸೋನಂ ಕೂಡ ಒಪ್ಪಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಾ ರಘುವಂಶಿ ಕೊಲೆ ನಂತರ ಸೋನಮ್ 17 ದಿನಗಳ ಕಾಲ ಎಲ್ಲಿದ್ದರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ರಾಜಾ ರಘುವಂಶಿ ಹತ್ಯೆ ಪ್ರಕರಣ ಸಂಬಂಧ ಸೋನಂ ಪ್ರಿಯಕರ ರಾಜ್ ಕುಶ್ವಾಹ, ಮಧ್ಯಪ್ರದೇಶದ ಬಿನಾ ಮೂಲದ ಆನಂದ್, ಇಂದೋರ್‌ನ ಆಕಾಶ್ ರಜಪೂತ್ ಮತ್ತು ಉತ್ತರ ಪ್ರದೇಶದ ಲಲಿತ್‌ಪುರದ ಆಕಾಶ್ ಲೋಧಿ ಮತ್ತು ವಿಶಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೇಘಾಲಯ ಪೊಲೀಸರು ಉತ್ತರ ಪ್ರದೇಶದ ಘಾಜಿಪುರ ತಲುಪಿ ಇಂದೋರ್‌ನ ಸೋನಮ್ ರಘುವಂಶಿಯನ್ನು ವಶಕ್ಕೆ ಪಡೆದಿದ್ದು ಸಿಜೆಎಂ ನ್ಯಾಯಾಲಯವು ಸೋನಮ್ ಗೆ 72 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಇದಕ್ಕೂ ಮೊದಲು, ಪೊಲೀಸರು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಪಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಪತಿ ರಾಜಾ ರಘುವಂಶಿ ಹತ್ಯೆಯಾದ 17 ದಿನಗಳ ನಂತರ, ಜೂನ್ 8ರ ಮಧ್ಯರಾತ್ರಿ ಘಾಜಿಪುರದ ಧಾಬಾದಲ್ಲಿ ಸೋನಮ್ ಆತಂಕಗೊಂಡ ಸ್ಥಿತಿಯಲ್ಲಿ ಕಂಡುಬಂದಳು. ಒನ್ ಸ್ಟಾಪ್ ಸೆಂಟರ್‌ನಲ್ಲಿ ಸೋನಮ್ ಅವರನ್ನು ಸುಮಾರು 18 ಗಂಟೆಗಳ ಕಾಲ ಪೊಲೀಸ್ ಕಣ್ಗಾವಲಿನಲ್ಲಿ ಇರಿಸಲಾಗಿತ್ತು.