ಟ್ರಾಫಿಕ್ ಜಾಮ್.. ಫ್ಲೈಟ್ ಮಿಸ್.. ಉಳಿಯಿತು ಈ ಮಹಿಳೆ ಜೀವ

Views: 127
ಕನ್ನಡ ಕರಾವಳಿ ಸುದ್ದಿ: ಅಹ್ಮದಾಬಾದ್‌ನ ಟ್ರಾಫಿಕ್‌ನಲ್ಲಿ ಸಿಲುಕಿ ಲಂಡನ್ ವಿಮಾನ ತಪ್ಪಿಸಿಕೊಂಡ ಮಹಿಳೆಯೊಬ್ಬರು ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿದ್ದಾರೆ. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ವಿಮಾನ ತಪ್ಪಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಹ್ಮದಾಬಾದ್‌ನ ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಭೂಮಿ ಚೌಹಾಣ್‌ಗೆ.. ತಾವು ಹತ್ತಬೇಕಿದ್ದ ಲಂಡನ್ ವಿಮಾನ ತಪ್ಪಿಹೋಗುತ್ತದೆಯೇನೋ ಎಂಬ ಆತಂಕ, ಚಡಪಡಿಕೆ ಇತ್ತು. ಎರಡು ವರ್ಷಗಳ ನಂತರ ಭಾರತಕ್ಕೆ ಬಂದು.. ಮತ್ತೆ ಲಂಡನ್‌ನಲ್ಲಿರುವ ಪತಿಯನ್ನ ಸೇರಬೇಕೆಂಬ ತವಕದಲ್ಲಿದ್ದ ಅವರಿಗೆ, ಆ ಟ್ರಾಫಿಕ್ ತೀವ್ರ ಕಿರಿಕಿರಿ ಎನಿಸಿತ್ತು. ಕೊನೆಗೂ ಏರ್‌ಪೋರ್ಟ್ ತಲುಪಿದಾಗ ತಿಳಿಯಿತು. ಅವರು ಹತ್ತಬೇಕಿದ್ದ ಏರ್ ಇಂಡಿಯಾ ವಿಮಾನ ಎಐ-171 ಟೇಕಾಫ್ ಆಗಿದೆ. ಈ ವಿಚಾರ ಅವರಿಗೆ ಭಾರೀ ನಿರಾಸೆ ತಂದಿತ್ತು..
ಆದರೆ, ಕೆಲವೇ ಗಂಟೆಗಳಲ್ಲಿ ಆ ಹತಾಶೆ, ಅವರ ಪಾಲಿಗೆ ಭಯಾನಕ ಆಘಾತವಾಗಿ ಬದಲಾಯಿತು. ಅವರು ಹತ್ತಬೇಕಿದ್ದ ವಿಮಾನ ಟೇಕಾಫ್ ಆದ ಐದೇ ನಿಮಿಷದಲ್ಲಿ ಪತನಗೊಂಡು, ಅದರಲ್ಲಿ ಪ್ರಯಾಣಿಸುತ್ತಿದ್ದ 241 ಜನರಲ್ಲಿ ಬಹುತೇಕರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದು ಒಂದು ಕ್ಷಣ ಮಹಿಳೆ ದಿಕ್ಕೆ ತೋಚದಂತೆ ಮೌನಕ್ಕೆ ಶರಣಾಗಿದ್ದಾರೆ.ಆದರೆ ಇದೇ ಅದೃಷ್ಟ ಉಳಿದವರಿಗೆ ಇರಲಿಲ್ಲ ಅನ್ನೋದೇ ನೋವಿನ ಸಂಗತಿ.