ಇತರೆ

ಜೈಲಿನಿಂದಲೇ ಬಾರಕೂರು ಹೊಸಾಳದ ವ್ಯಕ್ತಿಗೆ ಜೀವ ಬೆದರಿಕೆ ಕರೆ!

Views: 219

ಕನ್ನಡ ಕರಾವಳಿ ಸುದ್ದಿ: ಮರಳುಗಾರಿಕೆ ದಂಧೆಗೆ ಸಂಬಂಧಿಸಿದಂತೆ ಜೈಲಿನಿಂದಲೇ ಅಪರಾದಿ ಕರೆ ಮಾಡಿ ಬಾರಕೂರು ಹೊಸಾಳದ ಪ್ರವೀಣ್‌ ಅವರಿಗೆ ಜೀವ ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಮನೆಯಲ್ಲಿರುವಾಗ ಅಂದಾಜು ರಾತ್ರಿ 8.30ರ ಸಮಯದಲ್ಲಿ ಇವರ ಪೋನ್ ಗೆ ಕರೆ ಮಾಡಿ ನಾನು ಹರೀಶ್ ರೆಡ್ಡಿ ಕಾರವಾರ ಜೈಲಿನಿಂದ ಮಾತಾಡುತ್ತಿದ್ದೇನೆ. ನೀನು ಅರ್ಜುನ್ ನಾಯರಿ, ನಿತಿನ್ ರೈ, ಜೋಸೆಫ್ ರವರಿಗೆ ಮರಳುಗಾರಿಕೆ ಮತ್ತು ಮರಳು ಯಾರ್ಡ್ ಮಾಡುವಲ್ಲಿ ಸುಖಾ ಸುಮ್ಮನೆ ತೊಂದರೆ ನೀಡಿದಲ್ಲಿ ಸರಿ ಇರುವುದಿಲ್ಲ. ನೀನು ನಿನ್ನ ಕೆಲಸವನ್ನು ಮಾಡಿಕೊಂಡು ಹೋಗು ಊರು ಉದ್ಧಾರ ಮಾಡುವ ಉಸಾಬರಿ ನಿನಗೆ ಬೇಡ. ಹೀಗೆ ಅಧಿಕ ಪ್ರಸಂಗ ಮಾಡುತ್ತ ಇದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಿನಗೆ ಜೀವದ ಮೇಲೆ ಆಸೆ ಇದೆಯಾ ಇಲ್ಲವಾ ಎಂದು ಹೇಳಿ ಫೋನ್ ಕರೆಯನ್ನು ಡಿಸ್‌ಕನೆಕ್ಟ್ ಮಾಡಿದ್ದಾರೆ.

ಪ್ರವೀಣ್‌ ಅವರಿಗೆ ಮಾ.6 ರಂದು ಬೆಳಿಗ್ಗೆ ಪುನಃ ಪೋನ್ ಕಾಲ್ ಬಂದಿದೆ. ಮತ್ತೆ ಏಪ್ರಿಲ್ 2ರಂದು ರಾತ್ರಿ 8 ಗಂಟೆಗೆ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ನಮ್ಮವರ ಎಲ್ಲ ಕೆಲಸ ಸುಸೂತ್ರವಾಗಿ ನಡೆಯುತ್ತಿದೆಯಲ್ಲ ಅಂತ ಕೇಳಿದ್ದಾರೆ. ಈ ಪ್ರಕರಣದಲ್ಲಿ ಪ್ರವೀಣ ಅವರಿಗೆ ಅರ್ಜುನ್ ನಾಯರಿ ನಿತಿನ್ ರೈ ಮತ್ತು ಜೋಸೆಫ್ ರವರು ಹಲವಾರು ವ್ಯಕ್ತಿಗಳಿಂದ ಕರೆ ಮಾಡಿಸಿ ಜೀವ ಬೆದರಿಕೆ ಹಾಕಿಸಿದ್ದಾರೆ ಎಂದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button