ಜೆ.ಸಿ.ಐ ಕುಂದಾಪುರ : ಶಿವಪುರ ಕ್ಲಿನಿಕ್ ನ ಡಾ.ಎಸ್.ಪಿ.ಆಚಾರ್ಯ ರವರಿಗೆ ಸನ್ಮಾನ

Views: 0
ಜೆಸಿಐ ಕುಂದಾಪುರದ ವತಿಯಿಂದ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಜೆಸಿ ಕುಂದಾಪುರದ ಅಧ್ಯಕ್ಷರಾದ ಜೆಸಿ ಸುಧಾಕರ್ ಕಾಂಚನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೆಸಿಐ ಪೂರ್ವ ವಲಯ ಅಧಿಕಾರಿ ಜೆಸಿ ರತ್ನಾಕರ್ ಕುಂದಾಪುರ ಅತಿಥಿಯಾಗಿ ಮಾತನಾಡಿ, ಕೋಟೇಶ್ವರದ ಹೆಸರಾಂತ ವೈದ್ಯರಾಗಿರುವ ಆರು ದಶಕಗಳಿಂದ ವೈದ್ಯ ಸೇವೆಯೊಂದಿಗೆ ಸಾಮಾಜಿಕ ಕಳಕಳಿಯಿಂದ ಸಮಾಜ ಸೇವೆ ಮಾಡುತ್ತಿರುವ ಡಾ.ಎಸ್.ಪಿ. ಆಚಾರ್ಯ ವೈದ್ಯರು ತಮ್ಮ ಪತ್ನಿ ಯೊಂದಿಗೆ ಅವಿರತವಾಗಿ ಯಾವುದೇ ದೊಡ್ಡ ಪ್ರತಿಫಲ ಅಪೇಕ್ಷೆ ಇಲ್ಲದೆ ಗ್ರಾಮೀಣ ಭಾಗವಾಗಿರುವ ಕೋಟೇಶ್ವರ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಮನೆ ಮಾತಾಗಿರುವ ಅವರ ಸೇವೆ ಇಂದಿನ ಯುವ ಜನಾಂಗಕ್ಕೆ ಮಾದರಿ,ವೈದ್ಯರ ದಿನಾಚರಣೆ ಅರ್ಥಪೂರ್ಣ ವಾಗಿ ಮೂಡಿ ಬಂದಿದೆ ಎಂದರು .
ನಂತರ ವೈದ್ಯ ದಂಪತಿಗಳನ್ನ ಗೌರವಿಸಲಾಯಿತು ಈ ಸಂದರ್ಭದಲ್ಲಿ ಜೆಸಿ ಪುಷ್ಪಲತಾ ರತ್ನಾಕರ್, ಜೆಸಿ ಉದಯಕುಮಾರ್ ಕೆ ವಿ, ಜೆ ಸಿ ರವಿಚಂದ್ರ ಹಾಗೂ ಜೂನಿಯರ್ ಜೆಸಿ ರತ್ವಿಕ್ ಆರ್ ಕುಂದಾಪುರ ಜೇಸಿ ಸದಸ್ಯರು ಉಪಸ್ಥಿತರಿದ್ದರು ಕಾರ್ಯದರ್ಶಿ ಜೆಸಿ ರಾಕೇಶ್ ಶೆಟ್ಟಿ ವಕ್ವಾಡಿ ವಂದಿಸಿದರು.