ಜಯಪ್ರಕಾಶ್ ಹೆಗ್ಡೆ ಸಕ್ರೀಯ ರಾಜಕಾರಣಕ್ಕೆ..! ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್..!?

Views: 104
ಜಯಪ್ರಕಾಶ್ ಹೆಗ್ಡೆ ಸಕ್ರೀಯ ರಾಜಕಾರಣಕ್ಕೆ..! ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್..!?
ಬಿಜೆಪಿ ಭದ್ರಕೋಟೆ ಎಂದು ಕರೆಯಲ್ಪಡುವ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ತನ್ನ ನೆಲೆಯೂರಲು ಕಸರತ್ತು ಮಾಡುತ್ತಿದೆ. ಲೋಕಸಮರದಲ್ಲಿ ಕರಾವಳಿ ಮಲೆನಾಡು ಭಾಗಗಳಿಂದ ಕೂಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಕಪಿಮುಷ್ಟಿಯಿಂದ ಕಿತ್ತುಕೊಳ್ಳಲು ಅಸ್ತ್ರವೊಂದನ್ನು ಪ್ರಯೋಗಿಸಲು ಕಾಂಗ್ರೆಸ್ ಸಿದ್ಧವಾಗ್ತಿದೆ.
ಲೋಕಸಭೆ ಸಮೀಸುತ್ತಿದ್ದಂತೆ ಚುನಾವಣೆ ಕಣ ರಂಗೇರುತ್ತಿದೆ. ಇತ್ತ ರಾಜ್ಯದಲ್ಲಿ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ಹಣಿಯಲು ಭಾರೀ ರಣತಂತ್ರವನ್ನೇ ರೂಪಿಸುತ್ತಿದೆ.
ಜಾತಿಗಣತಿ ವರದಿ ಸಲ್ಲಿಸಿ ಜಯಪ್ರಕಾಶ್ ಹೆಗ್ಡೆ ಹಿಂದುಳಿದ ಆಯೋಗದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ.. ತಮ್ಮ ಸೇವಾವಧಿ ಮುಗಿಸಿ ಸೇವೆಯನ್ನು ಮುಗಿಸಿದ್ದಾರೆ.. ಇದೀಗ ಜಯಪ್ರಕಾಶ್ ಹೆಗ್ಡೆ ರಾಜಕೀಯಕ್ಕೆ ರೀ ಎಂಟ್ರಿ ಕೊಡ್ತಾರೆ ಎಂಬ ಮಾತು ಕೇಳಿಬಂದಿದೆ.. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಸಮರಕ್ಕೆ ಧುಮುಕಲಿದ್ದಾರೆ ಎನ್ನಲಾಗ್ತಿದೆ.
ಲೋಕಸಭೆಯಲ್ಲಿ ಉಡುಪಿ ಚಿಕ್ಕಮಗಳೂರಲ್ಲಿ ಬಿಜೆಪಿ ಕಟ್ಟಿಹಾಕಲು ಕಾಂಗ್ರೆಸ್ ಪ್ಲಾನ್ ಮಾಡಿದೆ.. ಈ ಕ್ಷೇತ್ರಗಳಲ್ಲಿ ಜಾತಿ ಸಮುದಾಯವಾರು ಲೆಕ್ಕಾಚಾರದಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಸಿದ್ಧತೆ.
ಒಕ್ಕಲಿಗರ ಅಭ್ಯರ್ಥಿ ವಿರುದ್ಧ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲು ಪ್ಲಾನ್ ಮಾಡಿದೆ. ಈ ನಿಟ್ಟಿನಲ್ಲಿ ಬಂಟ ಸಮುದಾಯದ ಪ್ರಬಲ ನಾಯಕ ಜಯಪ್ರಕಾಶ್ ಹೆಗ್ಡೆ ಕಣಕ್ಕೆ ಇಳಿಸಲು ಕಾಂಗ್ರೆಸ್ನಿಂದ ತಯಾರಿ ಮಾಡಿದೆ. ಇಂದು ಸಿಎಂ ಸಿದ್ದರಾಮಯ್ಯ ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಹೆಗ್ಡೆ ಅವರನ್ನು ವಿಧಾನ ಸಭೆ ಅಥವಾ ಲೋಕಸಭೆಗೆ ಟಿಕೆಟ್ ಕೊಡಿಸುವ ಭರವಸೆಯಿಂದ ಕಾಂಗ್ರೆಸ್ ನಿಂದು ಬಿಜೆಪಿಗೆ ಕರೆತಂದು ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ಈಡಿಗ ಹಾಗೂ ಬಂಟ ಸಮುದಾಯವನ್ನು ಬಿಜೆಪಿ ದೂರ ಇಡುವ ಪ್ರಯತ್ನ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿ ಈ ಭಾಗದಲ್ಲಿ ಜಯಪ್ರಕಾಶ್ ಹೆಗ್ಡೆ ಈ ಹಿಂದೆ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಅವರಿಗೆ ಸೋಲಾಗಿದ್ದರಿಂದ ಅನುಕಂಪದ ಅಲೆ ಸೃಷ್ಟಿ ಮಾಡಬಹುದು.ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಲೆನಾಡಿನಲ್ಲಿ ನಾಲ್ಕು ಕಾಂಗ್ರೆಸ್ ಕರಾವಳಿಯಲ್ಲಿ ನಾಲ್ಕು ಬಿಜೆಪಿ ವಿಧಾನ ಸಭಾ ಕ್ಷೇತ್ರ ಇರುವುದರಿಂದ ಸದ್ಯ ಸಮಬಲದ ಹೋರಾಟ ಕಣವಾಗಿದೆ.ಶೋಭಾ ಸ್ಪರ್ಧಿಸಿದಲ್ಲಿ ಬಂಟರು ಹೆಗ್ಡೆ ಕೈಹಿಡಿಯಬಹುದು ಎಂಬುವುದೇ ಕೈ ಮಾಸ್ಟರ್ ಪ್ಲಾನ್
ಈ ಕ್ಷೇತ್ರದಲ್ಲಿ ಬಂಟ, ಈಡಿಗ ಸಮುದಾಯದ ವೋಟ್ಗಳೇ ನಿರ್ಣಾಯಕವಾಗಿವೆ.. ಹೀಗಾಗಿ ಬಿಜೆಪಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಕಣಕ್ಕೆ ಇಳಿಸಲು ತಯಾರಿ ನಡೆಸಿದೆ. ಅತ್ತ ಬಿಜೆಪಿಯಲ್ಲಿ ಶೋಭ ಕರಂದ್ಲಾಜೆ ವಿರುದ್ಧ ಸಾಕಷ್ಟು ವಿರೋಧ ಇದ್ದು, ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸಿದ್ರೆ ಗೆಲುವು ಪಕ್ಕಾವೆಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿದೆ.
ಒಟ್ಟಾರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಸಮುದಾಯವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ತಯಾರಿ ನಡೆಸ್ತಿದೆ.ಈ ಪ್ಲಾನ್ ಗೆ ಹೆಗ್ಡೆ ನಿರ್ಧಾರ ಕಾಯಬೇಕಾಗಿದೆ.ಈ ಎಲ್ಲಾ ಬೆಳವಣಿಗೆ ಯಲ್ಲಿ ಬಿಜೆಪಿ ಹೆಗ್ಡೆ ಅವರಿಗೆ ಟಿಕೆಟ್ ಕೊಟ್ಟರೂ ಆಶ್ಚರ್ಯವಿಲ್ಲ!