ಶಿಕ್ಷಣ
ಚಿನ್ನಕ್ಕೆ ಮುತ್ತಿಟ್ಟು ಸಾಧನೆಗೈದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು

Views: 196
ಕನ್ನಡ ಕರಾವಳಿ ಸುದ್ದಿ : ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲಿನ ವಿದ್ಯಾರ್ಥಿಗಳು ಉತ್ತರ ಕನ್ನಡ ಕರಾಟೆ ಅಸೋಸಿಯೇಷನ್ ಭಟ್ಕಳ ಇವರು ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದ ಕುಮಿಟೆ ವಿಭಾಗದಲ್ಲಿ ಆರ್ಯನ್ (8ನೇ ತರಗತಿ), ರಜತ್ (7ನೇ ತರಗತಿ) ಚಿನ್ನದ ಪದಕ ಹಾಗೂ ಗಗನ್ ( 6ನೇ ತರಗತಿ) ಕಂಚಿನ ಪದಕವನ್ನು ಗಳಿಸಿರುತ್ತಾರೆ. ಕಟಾ ವಿಭಾಗದಲ್ಲಿ ಗಗನ್ (6ನೇ ತರಗತಿ) ಚಿನ್ನದ ಪದಕ, ಅಕ್ಷಿತ್ (7ನೇ ತರಗತಿ), ಅನ್ವೇಷಣ(7ನೇ ತರಗತಿ) ಶ್ರೀಶಾ (4ನೇ ತರಗತಿ) , ರಜತ್ (7ನೇ ತರಗತಿ) ಬೆಳ್ಳಿಯ ಪದಕ ಹಾಗೂ ಆರ್ಯನ್ (8ನೇ ತರಗತಿ) ಕಂಚಿನ ಪದಕವನ್ನು ಗಳಿಸಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ , ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.