ಗುರುಕುಲ ಪದವಿ ಪೂರ್ವ ಕಾಲೇಜು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Views: 193
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ -ಉತ್ತಮ ಆರೋಗ್ಯದಿಂದ ಉತ್ತಮ ಜೀವನ ಕ್ರಮ ಸಾಧ್ಯ. ಪ್ರತಿನಿತ್ಯ ಯೋಗ ಮತ್ತು ಉತ್ತಮ ಆಹಾರ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಸ್ಥಿತಿ ಆರೋಗ್ಯಕರವಾಗಿರುತ್ತದೆ .ಇದು ನಮ್ಮ ದೇಶದ ಉದಾತ್ತ ಸಂಸ್ಕೃತಿ ಮಾತ್ರವಾಗಿರದೆ ಸರ್ವಕಾಲಕ್ಕೂ ಪಾಲಿಸಲು ಯೋಗ್ಯವಾದ ಜೀವನ ಸಾರವಾಗಿದೆ.ಇಂದು ಅಂತರಾಷ್ಟ್ರೀಯ ಸಂಗೀತ ದಿನವು ಆಗಿರುವುದು ವಿಶೇಷವಾಗಿದೆ.1982 ರಲ್ಲಿ ಫ್ರಾನ್ಸ್ ನಲ್ಲಿ ಆರಂಭಗೊಂಡ ಸಂಗೀತ ದಿನ ಇಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.ಯೋಗ ದಿನ ಹಾಗೂ ಸಂಗೀತ ದಿನ ಜಗತ್ತನ್ನ ಆವರಿಸಿರುವುದು ನಿಜಕ್ಕೂ ಹೆಮ್ಮೆ ತಂದಿದೆ. ನಾವು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು ಎಂದರು.
ಪ್ರಾಂಶುಪಾಲರದ ಡಾ. ರೂಪಾ ಶೆಣೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿ ರಾಹುಲ್ ಯೋಗದ ನಿಯಮಗಳನ್ನು ವಾಚಿಸಿದರು.
ಯೋಗ ಶಿಕ್ಷಕರಾದ ಶ್ರೀ ಪ್ರದೀಪ್ ಕುಮಾರ್ ಹಾಗೂ ಶ್ರೀ ಶಿವಮೂರ್ತಿ ವಿದ್ಯಾರ್ಥಿಗಳಿಗೆ ಯೋಗದ ಮಾರ್ಗದರ್ಶನ ನೀಡಿದರು.
ಡಾ. ಕೃಷ್ಣರಾಜ ಕರಬ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ ಅಂತಿಮವಾಗಿ ವಂದಿಸಿದರು.