ಸಾಮಾಜಿಕ
ಗಿಫ್ಟ್ ಕೊಡದಿದ್ದಕ್ಕೆ ಮಧ್ಯರಾತ್ರಿ ಎದ್ದು. ಗಂಡನಿಗೆ ಚಾಕು ಇರಿದ ಪತ್ನಿ

Views: 179
ಮದುವೆ ವಾರ್ಷಿಕೋತ್ಸವಕ್ಕೆ ಗಂಡ ಗಿಫ್ಟ್ ಕೊಟ್ಟಿಲ್ಲ ಎಂದು ಪತ್ನಿ ಚಾಕು ಇರಿದ ಘಟನೆ ಬೆಳ್ಳಂದೂರಿನಲ್ಲಿ ನಡೆದಿದೆ
ಮದುವೆ ವಾರ್ಷಿಕೋತ್ಸವ ಹಿನ್ನೆಲೆ ಗಂಡ ನಿದ್ದೆಗೆ ಜಾರಿದ್ದನು. ಇದರಿಂದ ಕೋಪಗೊಂಡಿದ್ದ ಹೆಂಡತಿ ಮಧ್ಯರಾತ್ರಿ 1:30 ರ ಸುಮಾರಿಗೆ ಚಾಕುವಿನಿಂದ ಇರಿದಿದ್ದಾಳೆ.
ಗಂಡ ಮಲಗಿ ನಿದ್ದೆ ಮಾಡುತ್ತಿದ್ದ ವೇಳೆ ಅಡುಗೆ ಮನೆಯಿಂದ ಚಾಕು ತಂದ ಪತ್ನಿ ಆತನಿಗೆ ಇರಿದಿದ್ದಾಳೆ. ಚಾಕುವಿನಿಂದ ಇರಿದ ಹಿನ್ನೆಲೆ ಪತಿಯ ಕೈಗೆ ಗಾಯವಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಗಂಡ ಮತ್ತು ಹೆಂಡತಿಯನ್ನು ಪೊಲೀಸರು ಕೌನ್ಸಲಿಂಗ್ ನಡೆಸಿದ್ದಾರೆ. ತನಿಖೆ ವೇಳೆ ಮೊದಲ ಬಾರಿಗೆ ಗಿಫ್ಟ್ ನೀಡಿಲ್ಲ ಎಂಬ ಸಂಗತಿ ಬಯಲಾಗಿದೆ. ಹೀಗಾಗಿ ಕೃತ್ಯವೆಸಗಿರುವುದಾಗಿ ಹೆಂಡತಿ ಒಪ್ಪಿಕೊಂಡಿದ್ದಾಳೆ.