ಸಾಮಾಜಿಕ

ಗಂಗೊಳ್ಳಿ: ವರದಕ್ಷಿಣೆ ತರುವಂತೆ ಹಲ್ಲೆ, ಮಾನಸಿಕ ಕಿರುಕುಳ ನೀಡಿದ ಪತಿ, ಅತ್ತೆ, ನಾದಿನಿ ವಿರುದ್ಧ ದೂರು 

Views: 269

ಕನ್ನಡ ಕರಾವಳಿ ಸುದ್ದಿ: ವರದಕ್ಷಿಣೆ ತರುವಂತೆ ಹಲ್ಲೆ ನಡೆಸಿ, ಮಾನಸಿಕ ಕಿರುಕುಳ ನೀಡಿರುವುದಾಗಿ ಹಂಗಳೂರಿನ ಸುನೀತಾ (26) ಅವರು ಪತಿ ಮೊವಾಡಿಯ ನಿವಾಸಿ ಪ್ರಾಕ್ಸನ್ ಡಾಯಸ್, ಅತ್ತೆ ಆಲಿಸ್ ಡಾಯಸ್ ಮತ್ತು ನಾದಿನಿ ಪ್ಲಾವಿಯಾ ಅಡಾ ವಿರುದ್ಧ ಗಂಗೊಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ಡಿ.2023ರಂದು ಪ್ರಾಕ್ಸನ್ ಜತೆಗೆ ಸುನೀತಾ ವಿವಾಹವಾಗಿತ್ತು. ಪತಿಯು ಪ್ರತೀ ದಿನ ಮದ್ಯ ಸೇವಿಸಿ ಬಂದು ಜಗಳ ಕಾಯುತ್ತಿದ್ದರು. 2 ತಿಂಗಳ ಬಳಿಕ ಅವರು ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದರು. ಅನಂತರ ಅತ್ತೆ ಹಾಗೂ ನಾದಿನಿ ಅವರು ಸುನೀತಾ ಮನೆ ಕೆಲಸ ಮಾಡುತ್ತಿಲ್ಲವೆಂದು, ತವರು ಮನೆಯಿಂದ ಬರುವಾಗ ಏನೂ ತಂದಿಲ್ಲವೆಂದು ಹೇಳಿ ಚುಚ್ಚು ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು. 2025ರ ಫೆ. 14ರಂದು ಪತಿ ಮರಳಿ ಬಂದಿದ್ದು ಫೆ. 17ರಂದು ನಾನು ತಾಯಿ ಮನೆಯಲ್ಲಿದ್ದಾಗ ಬಂದು ಹಲ್ಲೆ ಮಾಡಿದ್ದಾರೆ ಎಂದು ಸುನೀತಾ ದೂರಿನಲ್ಲಿ ತಿಳಿಸಿದ್ದಾರೆ.

Related Articles

Back to top button