ಇತರೆ

ಒಂಟಿ ವೃದ್ಧೆ ಹೃದಯಾಘಾತದಿಂದ ಸಾವು ಎಂದು ಎಲ್ಲರೂ ಭಾವಿಸಿದ್ದರು.. ಅಂತ್ಯಕ್ರಿಯೆಯಲ್ಲಿ ಬಯಲಾಯ್ತು ರಹಸ್ಯ!

Views: 117

ಕನ್ನಡ ಕರಾವಳಿ ಸುದ್ದಿ:  ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಅಂದು ಊರ ಹಬ್ಬದ ಸಂಭ್ರಮವಿತ್ತು. ಇಡೀ ಗ್ರಾಮಸ್ಥರೆಲ್ಲ ಅದೇ ಖುಷಿಯಲ್ಲಿದ್ದರು. ಆದ್ರೆ ಮಾರನೇ ದಿನ ಗ್ರಾಮದ 64 ವರ್ಷದ ಕಮಲಮ್ಮ ಮೃತಪಟ್ಟಿದ್ದರು. ಒಂಟಿ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿರಬೇಕೆಂದು ಎಲ್ಲರೂ ಭಾವಿಸಿದ್ದರು. ಆದ್ರೆ, ಅಂತ್ಯಕ್ರಿಯೆ ಹೊತ್ತಲ್ಲಿ ವೃದ್ಧೆಯ ಮೈಮೇಲಿದ್ದ ಒಡವೆ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಹೀಗಾಗಿ ಈ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ವೇಳೆ ವೃದ್ಧೆಯ ಸಾವಿನ ರಹಸ್ಯ ಬಯಲಾಗಿದೆ.ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿಲ್ಲ, ಬದಲಿಗೆ ಅಭಿಷೇಕ್ ಎಂಬಾತ ಕೊಲೆ ಮಾಡಿದ್ದಾನೆ ಎಂಬ ಸತ್ಯ ಹೊರಬಿದ್ದಿದೆ.

ಹಂತಕ ಶಿವಮೊಗ್ಗ ಮೂಲದ ಅಭಿಷೇಕ್ ಎಂಎಸ್ ಸಿ ಓದಿದ್ದ. ಆದ್ರೆ, ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು 20 ರಿಂದ 25 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲಕೊಟ್ಟವರ ಕಾಟ ತಾಳಲಾರದೆ ಊರು ಬಿಟ್ಟೋನು 2 ತಿಂಗಳ ಕಾಲ ಅಲ್ಲಿ ಇಲ್ಲಿ ಸುತ್ತಾಡಿ ದಾವಣಗೆರೆಯ ಆರುಂಡಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಆತನ ಕಣ್ಣು ವೃದ್ಧೆ ಕಮಲಮ್ಮರ ಒಡವೆ ಮೇಲೆ ಬಿದ್ದಿದೆ.

ಅತ್ತ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ರೆ, ಇತ್ತ ಈತ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದು, 8 ಲಕ್ಷದ 44 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಆ ಒಡವೆಗಳನ್ನು ಅಡವಿಟ್ಟು ಮತ್ತೆ ಆನ್‌ಲೈನ್ ಗೇಮ್ ಆಡಿದ್ದ. ಸದ್ಯ ಅಭಿಷೇಕ್ ಜೈಲು ಕಂಬಿ ಎಣಿಸುತ್ತಿದ್ದಾನೆ.

Related Articles

Back to top button
error: Content is protected !!