ಸಾಂಸ್ಕೃತಿಕ

ಕ್ರೋಶ ಸೀರೆ ಕುಚ್ಚು ತರಬೇತಿಯ ಉದ್ಘಾಟನಾ ಕಾರ್ಯಕ್ರಮ 

Views: 125

ಕನ್ನಡ ಕರಾವಳಿ ಸುದ್ದಿ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಗ್ರಾಮ ಪಂಚಾಯತ್ ಹಾರ್ದಳ್ಳಿ ಮಂಡಳ್ಳಿ, ಸಮೃದ್ಧಿ ಸಂಜೀವಿನಿ ಒಕ್ಕೂಟ ಹಾರ್ದಳ್ಳಿ ಮಂಡಳ್ಳಿ ಇವರ ಆಯೋಜನೆಯಲ್ಲಿ 6 ದಿನಗಳ ಕ್ರೋಶ ಸೀರೆ ಕುಚ್ಚು ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣ ಹಾರ್ದಳ್ಳಿ ಮಂಡಳ್ಳಿ ಯಲ್ಲಿ ನೆರವೇರಿತು.

ತರಬೇತಿಯನ್ನು ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ, ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು, ಬ್ಯಾಂಕ್ ಆಫ್ ಬರೋಡಾ ಹಾಲಾಡಿ ಬ್ರಾಂಚ್ ಮ್ಯಾನೇಜರ್ ಸುಬ್ರಹ್ಮಣ್ಯ , ಸಮೃದ್ದಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಸುಶೀಲ, ತರಬೇತುದಾರರಾದ ನಿಶ್ಮಿತಾ ತೆಕ್ಕಟ್ಟೆ ಉಪಸ್ಥಿತರಿದ್ದು ಶುಭಹಾರೈಸಿದರು.

ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು ತರಬೇತಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅಶ್ವಿನಿ ಸ್ವಾಗತಿಸಿ, ಸ್ವಾತಿ ವಂದಿಸಿ, ಸುಜಾತ ಪ್ರಾರ್ಥಿಸಿ ನಿರೂಪಿಸಿದರು. ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್ ಸಹಕರಿಸಿದರು.ಒಟ್ಟು 25 ಮಂದಿ ಫಲಾನುಭವಿಗಳು ಉಪಸ್ಥಿತರಿದ್ದರು.

Related Articles

Back to top button