ಶಿಕ್ಷಣ

ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನದ ಜಾಗೃತಿ ಉಪನ್ಯಾಸ

Views: 23

ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರದಲ್ಲಿ ಚುನಾವಣಾ ಸಾಕ್ಷಾರತ ಸಂಘ, ರಾಜ್ಯಶಾಸ್ತ್ರ ವಿಭಾಗ ಹಾಗು ಎನ್‌ ಎಸ್‌ ಎಸ್‌ ಘಟಕದ ವತಿಯಿ ವಿದ್ಯಾರ್ಥಿಗಳಿಗೆ ಸಂವಿಧಾನದ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಏಪ೯ಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ  ರಾಜ್ಯಶಾಸ್ತ್ರ ವಿಭಾಗ, ಸರಕಾರಿ ಪದವಿ ಪೂವ೯ ಕಾಲೇಜು ಬಿದ್ಕಲ್‌ ಕಟ್ಟೆ ಇಲ್ಲಿನ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಕಿಣಿ ಇವರು ವಿದ್ಯಾಥಿ೯ಗಳನ್ನು ಕುರಿತು ಸಂವಿಧಾನದ ಪ್ರಸ್ಥಾವನೆ,ಅದರ ಗುರಿ ಮತ್ತು ಉದ್ದೇಶಗಳ ಬಗ್ಗೆ ಹಕ್ಕು ಮತ್ತು ಕತ೯ವ್ಯಗಳ ಬಗ್ಗೆ ಹಿತವಚನ ನುಡಿದು, ಸಂವಿಧಾನದ ಪ್ರತಿಜ್ಞಾವಿಧಿ ಓದಿಸಲಾಯಿತು.

ಕಾಲೇಜಿನ ಪ್ರಿನ್ಸಿಪಾಲ್‌ ಶ್ರೀ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿ, ಸಂವಿಧಾನದವು ಒಂದು ದೇಶದ ಆಳ್ವಿಕೆ, ಪ್ರಜೆಗಳ ಹಕ್ಕು, ಕತ೯ವ್ಯಗಳನ್ನು ಮತ್ತು ಸರಕಾರದ ವಿವಿಧ ಅಂಗಗಳ ನಡುವಿನ ಸಂಬಂಧಗಳನ್ನು ನಿಧ೯ರಿಸುವ ಮೂಲಭೂತ ದಾಖಲೆಯಾಗಿದೆಯೆಂದರು.

ಶ್ರೀ ಗಣೇಶ್‌ ಪೈ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕರು, ಡಾ.ಶೇಖರ್‌ ಬಿ. ವಾಣಿಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರು , ಶ್ರೀ ರವಿಚಂದ್ರ ಎಚ್‌ ಎಸ್‌ ಗ್ರಂಥಪಾಲಕರು ಮತ್ತು ನಿರಂಜನ್‌ ಶಮಾ೯ ಇಂಗ್ಲೀಷ್‌ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ವಿದ್ಯಾಥಿ೯ ಪ್ರತಿನಿಧಿಗಳಾದ ನಿತಿನ್‌,ಸುದೀಪ್‌ ಹಾಗು ಭೋಧಕ / ಭೋಧಕೇತರ ವಗ೯ದವರು ಹಾಗು ವಿದ್ಯಾಥಿ೯ ವೃಂದದವರು ಉಪಸ್ಥಿತರಿದ್ದರು.

ನಾಗಮ್ಮ ಮತ್ತು ತಂಡದವರು ಪ್ರಾಥ೯ನೆ ಮಾಡಿದರು.ತಿಲಕ ಇವರು ಕಾಯ೯ಕ್ರಮ ನಿರೂಪಿಸಿದರು. ಚುನಾವಣಾ ಸಾಕ್ಷಾರತ ಸಂಘದ ಸಂಚಾಲಕರಾದ ಡಾ.ಭಾಗೀರಥಿ ನಾಯ್ಕ್‌ ಸ್ವಾಗತಿಸಿ, ಎನ್‌ ಎಸ್‌ ಎಸ್‌ ಘಟಕ-1 ರ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ರೋಹಿಣಿ ವಂದಿಸಿದರು.

Related Articles

Back to top button