ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನ ರಥಬೀದಿಯ ಜಾಗ ಒತ್ತುವರಿ ಮಾಡಿದಲ್ಲಿ ಸಾರ್ವಜನಿಕರ ಹೋರಾಟದ ಎಚ್ಚರಿಕೆ

Views: 499
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಕೋಟಿಲಿಂಗೇಶ್ವರ ರಥಬೀದಿಯ ಧಾರ್ಮಿಕ ದತ್ತಿ ಇಲಾಖೆಯ ಸ್ಥಳ ಒತ್ತುವರಿ ಮಾಡಿದಲ್ಲಿ ಸಾರ್ವಜನಿಕರ ಹೋರಾಟ ಅನಿವಾರ್ಯವಾದೀತು.ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತು ದೇವರ ಜಾಗವನ್ನು ಉಳಿಸಿಕೊಳ್ಳಲು ಭಕ್ತರು ಕುಂದಾಪುರದ ತಹಶೀಲ್ದಾರ್ ಕಚೇರಿ ತನಕ ಪಾದಯಾತ್ರೆಯ ಮೂಲಕ ತೆರಳಿ ಹೋರಾಟ ನಡೆಸಲಿದ್ದೇವೆ ಎಂದು ಶಂಕರ್ ಅಂಕದಕಟ್ಟೆ ಹೇಳಿದರು.
ಶನಿವಾರ ಜರಗಿದ ಭಕ್ತರ ಸಭೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನದ ಸ್ಥಿರಾಸ್ತಿಗೆ ಸಂಬಂಧಿಸಿದ ಒತ್ತುವರಿಗಳ ಬಗ್ಗೆ ಸರಕಾರದ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಕುಂದಾಪುರ ರೈಲ್ವೇ ಹಿತರಕ್ಷಣ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಸ್ಥಳೀಯರಾದ ಶೇಖರ ಕೋಟೇಶ್ವರ ಇನ್ನಿತರರು ಮಾತನಾಡಿ, ಅನಧಿಕೃತವಾಗಿ ರಥಬೀದಿಯನ್ನು ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.ದೇವಸ್ಥಾನದ ಉಳಿವಿಗಾಗಿ ಯಾವುದೇ ರಾಜಕೀಯ ಸಲ್ಲದು ಎಂದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ, ದೇಗುಲದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ ಮಾರ್ಕೊಡು, ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ಸುರೇಶ್ ಬೆಟ್ಟಿನ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ರಾಗಿಣಿ ದೇವಾಡಿಗ, ಬೀಜಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಪೂಜಾರಿ, ಕೋಟೇಶ್ವರ ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣಗೊಲ್ಲ ಶ್ರೀನಿವಾಸ ಕುಂದರ್, ಭಾಸ್ಕರ ಹಳೆಅಳಿವೆ, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಮುಖಂಡರು ಹಾಗೂ ದೇಗುಲದ ಭಕ್ತರು ಉಪಸ್ಥಿತರಿದ್ದರು.