ಕೋಟೇಶ್ವರ:ಬೀಜಾಡಿ ಏಕದಂತ ಸೌಹಾರ್ದ ಸೊಸೈಟಿಗೆ ವಂಚಿಸಿ,ಕೊಲೆ ಬೆದರಿಕೆ

Views: 288
ಕುಂದಾಪುರ : ಕೋಟೇಶ್ವರ ಬೀಜಾಡಿಯ ಶ್ರೀ ಏಕದಂತ ಸೌಹಾರ್ದ ಸಹಕಾರಿ ಸಂಘ (ನಿ) ಸೊಸೈಟಿಗೆ ವಂಚಿಸಿ,ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಸೆ.09-2023 ರಂದು 1 ನೇ ಆರೋಪಿತ ಸತೀಶ್ ಹಾಗೂ 2 ನೇ ಆರೋಪಿತ ನಾರಾಯಣ ಇವರು ಪಿರ್ಯಾದಿ ಮನ್ಸೂರ್ ಇಬ್ರಾಹಿಂ ಮರವಂತೆ (48) ಇವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಕೋಟೇಶ್ವರದ ಬೀಜಾಡಿ ಪ್ರಭು ಹೋಟೆಲ್ ಪಕ್ಕದಲ್ಲಿ ಇರುವ ಸಿದ್ದಿ ಪ್ರಭಾ ಕಾಂಪ್ಲೆಕ್ಸ್ ನಲ್ಲಿ ಇರುವ ಶ್ರೀ ಏಕದಂತ ಸಹಾರ್ದ ಸಹಕಾರಿ ಸಂಘ (ನಿ) ಸದ್ರಿ ಸೊಸೈಟಿಯಲ್ಲಿ 10,00,000 ರೂ ನಿರಖು ಠೇವಣಿ ಇಟ್ಟಲ್ಲಿ 20 ಲಕ್ಷ ರೂ ಹಣವನ್ನು ಸಾಲದ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದು, ಅದರಂತೆ ದಿನಾಂಕ 22-09-2023 ರಂದು ಪಿರ್ಯಾದಿದಾರರು ಹಾಗೂ ಅವರ ಪತ್ನಿ ಹಸೀನಾ, ಹಾಗೂ ಮಗ್ದೂಂ ಇಸ್ಮಾಯಿಲ್ ಎಂಬುವವರು ಸದಸ್ಯತ್ವ ಪಡೆದುಕೊಂಡು, ರೂ 5,00,000 ರೂಗಳನ್ನು ನಗದು ರೂಪದಲ್ಲಿ ಹಾಗೂ 5,00,000 ರೂಗಳನ್ನು 1 ನೇ ಆರೋಪಿತನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು 5,00,000 ರೂಗಳಿಗೆ ಬಾಂಡ್ ನೀಡಿದ್ದು ಉಳಿದ 5,00,000 ರೂಗಳಿಗೆ ಠೇವಣಿ ಬಾಂಡ್ ಆಗಲಿ, ಠೇವಣಿಯ ಹಣವಾಗಲಿ ಅಥವಾ ಸಾಲದ ರೂಪದಲ್ಲಿ ನೀಡುವ ಹಣವಾಗಲಿ ನೀಡಿರುವುದಿಲ್ಲ.
ದಿನಾಂಕ 16-11-2023 ರಂದು ಠೇವಣಿ ಮಾಡಿದ ಹಣವನ್ನು ಪಿರ್ಯಾದಿದಾರರು ಕೇಳಿದಾಗ ಆಪಾದಿತರು ಚೆಕ್ ನೀಡಿದ್ದು, ಸದ್ರಿ ಚೆಕ್‌ನಲ್ಲಿ ಸಹಿ ಸರಿಯಾಗಿ ಮಾಡದೇ ಇರುವುದರಿಂದ ಮತ್ತು ಪಿರ್ಯಾದಿದಾರರ ಹೆಸರನ್ನು ಮತ್ತು ಹಣವನ್ನು ಸರಿಯಾಗಿ ಬರೆಯದೇ ಇರುವುದರಿಂದ ಸದ್ರಿ ಚೆಕ್ ವಾಪಾಸಾಗಿರುತ್ತದೆ. ದಿನಾಂಕ 09-12-2023 ರಂದು ಆರೋಪಿ ಸತೀಶ್,ನಾರಾಯಣ , ಲೋಕೇಶ, ಸುಜಯ್ ಇತರ ಎರಡು ಜನ ರೆಲ್ಲರೂ ಸೇರಿ ಪಿರ್ಯಾದಿದಾರರನ್ನು ಪೋನ್ ಮಾಡಿ ಕೋಟೇಶ್ವರದ ಕಾಳಾವರ ಬ್ರಿಡ್ಜ್ ಬಳಿ ಎರಡು ಕಾರುಗಳಲ್ಲಿ ಬಂದು ಪಿರ್ಯಾದಿದಾರರನ್ನುದ್ದೇಶಿಸಿ ಕೊಡಬೇಕಾಗಿದ್ದ ಹಣ ವಾಪಾಸು ಕೊಡುವುದಿಲ್ಲ ಏನು ಬೇಕಾದರೂ ಮಾಡಿಕೋ ದೂರು ನೀಡಿದ್ದಲ್ಲಿ ನಿನ್ನನ್ನು ಕೊಲ್ಲುವುದಾಗಿʼ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2024 ಕಲಂ 406, 419, 420, 465, 468, 471, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.