ಕರಾವಳಿ

ಕೇರಳದಲ್ಲಿ ಬಂಧನಕ್ಕೊಳಗಾಗಿದ್ದ ಚಿಕ್ಕಮಗಳೂರಿನ ನಕ್ಸಲ್ ಶ್ರೀಮತಿಗೆ 14 ದಿನ ನ್ಯಾಯಾಂಗ ಬಂಧನ

Views: 37

ಚಿಕ್ಕಮಗಳೂರು: ಕೇರಳದಲ್ಲಿ ಬಂಧನಕ್ಕೊಳಗಾಗಿದ್ದ ಚಿಕ್ಕಮಗಳೂರಿನ ನಕ್ಸಲ್ ಶ್ರೀಮತಿಗೆ ಎನ್.ಆರ್.ಪುರ ನ್ಯಾಯಾಲಯದಿಂದ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಶ್ರೀಮತಿ ಮೇಲೆ ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಬಳಕೆ, ಟೆಂಟ್ ಹಾಕಿದ್ದು, ಗನ್ ತೋರಿಸಿ ಬೆದರಿಸಿ ಸುಲಿಗೆ ಪೊಲೀಸರಿಗೆ ಸಹಕಾರ ಮಾಡದಂತೆ ಬೆದರಿಕೆ ಸೇರಿದಂತೆ ಸುಮಾರು 9ಕ್ಕೂ ಹೆಚ್ಚು ಪ್ರಕರಣಗಳು ಶ್ರೀಮತಿ ಮೇಲಿತ್ತು ಎನ್ನಲಾಗಿದೆ. ಅದರಂತೆ ಶ್ರೀಮತಿ ಅವರನ್ನು ಕೇರಳದಲ್ಲಿ ಬಂಧಿಸಿ ಕಾರ್ಕಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು ಇದೀಗ ಕಾರ್ಕಳ ಪೊಲೀಸರಿಂದ ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ಎನ್.ಆರ್.ಪುರ ಕೋರ್ಟ್ ಗೆ ಹಾಜರುಪಡಿಸಿದ್ದರು ಈ ವೇಳೆ ಶ್ರೀಮತಿಯನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ

Related Articles

Back to top button