ಇತರೆ

ಕುಂದಾಪುರ:ಲಾರಿ-ಬೈಕ್ ನಡುವೆ ಅಪಘಾತ,ಬೈಕ್‌ ಸವಾರ ಸಾವು 

Views: 97

ಕನ್ನಡ ಕರಾವಳಿ ಸುದ್ದಿ: ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಹೆದ್ದಾರಿಯಲ್ಲಿ ಮಂಗಳವಾರ ನಡೆದ ಬೈಕ್ ಹಾಗೂ ಕಂಟೈನರ್ ಲಾರಿ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಬೈರು ಎಂಬವರ ಪುತ್ರ ಜಯರಾಮ್ ಕಾಟ್ಕೋಟ (32) ಎಂದು ತಿಳಿದಿದೆ.

ಕಂಟೈನ‌ರ್ ಚಕ್ರದ ಅಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಅಪರಿಚಿತ ಯುವಕನನ್ನು ಸ್ಥಳೀಯರಾದ ಆಟೋ ಚಾಲಕ ಹರೀಶ್ ಪೂಜಾರಿ ಹಾಗೂ ಗಂಗೊಳ್ಳಿಯ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಹೊರತೆಗೆದರು.

ಉಡುಪಿ ಕಡೆ ರೋಗಿ ಒಬ್ಬರನ್ನು ಬಿಟ್ಟು ವಾಪಸ್‌ ಬರುತ್ತಿದ್ದ ತಾಲೂಕು ಆಸ್ಪತ್ರೆ ಹೊನ್ನಾವರದ ಆಂಬುಲೆನ್ಸ್ ಚಾಲಕ ನಾಗರಾಜ್ ನಾಯ್ ಅವರಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ವಿನಂತಿಸಲಾಯಿತು. ಕುಂದಾಪುರ ಸರಕಾರಿ ಆಸ್ಪತ್ರೆಗೆ ತಂದಾಗ ಪರೀಕ್ಷಿಸಿದ ವೈದ್ಯರು ಗಾಯಾಳು ಅಪರಿಚಿತ ಮೃತಪಟ್ಟಿದ್ದಾಗಿ ತಿಳಿಸಿದರು.

ಯುವಕನ ಪ್ಯಾಂಟ್ ಕಿಸೆಯಲ್ಲಿದ್ದ ಲೈಸೆನ್ಸ್ ಆಧಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಬೈರು ಎಂಬವರ ಪುತ್ರ ಜಯರಾಮ್ ಕಾಟ್ಕೋಟ (32) ಎಂದು ತಿಳಿದಿದೆ. ಇದನ್ನು ಇಬ್ರಾಹಿಂ ಅವರು ಆಂಬುಲೆನ್ಸ್ ಚಾಲಕರ ಗುಂಪಿನಲ್ಲಿ ಹಾಕಿದಾಗ ವ್ಯಕ್ತಿಯ ಸಂಬಂಧಿಕರಿಗೆ ವಿಷಯ ತಿಳಿಯಿತು. ಸಂಜೆ ವೇಳೆಗೆ ಕುಟುಂಬಸ್ಥರು ಆಸ್ಪತ್ರೆಗೆ ಬಂದಿದ್ದು ಶವ ಮಹಜರು ಪ್ರಕ್ರಿಯೆ ನಡೆಯಿತು. ಮೃತ ವ್ಯಕ್ತಿ ಉಡುಪಿಯಲ್ಲಿ ಕೆಲಸ ಮಾಡುವವರಾಗಿದ್ದು ಮದುವೆಯಾಗಿ ಇಬ್ಬರು ಪುಟ್ಟ ಮಕ್ಕಳಿದ್ದಾರೆ ಎನ್ನಲಾಗಿದೆ.

Related Articles

Back to top button
error: Content is protected !!