ಇತರೆ

ಅಪಾರ್ಟ್‌ಮೆಂಟ್‌ನಲ್ಲಿ ಟವಲ್‌ನಿಂದ ಕತ್ತು ಬಿಗಿದು ಪತ್ನಿ ಹತ್ಯೆಗೈದ ಇಸ್ರೋ ನಿವೃತ್ತ ಉದ್ಯೋಗಿ

Views: 38

ಕನ್ನಡ ಕರಾವಳಿ ಸುದ್ದಿ: ಇಸ್ರೋ ನಿವೃತ್ತ ಉದ್ಯೋಗಿಯೊಬ್ಬರು ಪತ್ನಿಯನ್ನೇ ಹತ್ಯೆಗೈದ ದಾರುಣ ಘಟನೆ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್ ರಾವ್ (75) ಎಂಬುವವರು ನೋಡಿಕೊಳ್ಳುವವರು ಯಾರು ಇಲ್ಲವೆಂದು ಪತ್ನಿ ಸಂಧ್ಯಾಳನ್ನು ಟವಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಆತ್ಮಹತ್ಯೆಗೆ ತೀರ್ಮಾನಿಸಿದ್ದ ನಾಗೇಶ್ವರ್ ರಾವ್, ನಂತರ ಪತ್ನಿ ಒಂಟಿಯಾಗುತ್ತಾಳೆ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಿದ್ದರು ಎಂದು ತಿಳಿದುಬಂದಿದೆ.

ಸಂಧ್ಯಾಶ್ರೀ ಅವರು ಮನೆಯ ಅಡುಗೆ ಮನೆಯಲ್ಲಿ ಇದ್ದಾಗ ಕೃತ್ಯ ನಡೆಸಲಾಗಿದೆ. ಇಂದು (ಫೆಬ್ರವರಿ 18) ಬೆಳಗ್ಗೆ ಹತ್ತು ಘಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ನಾಗೇಶ್ವರ ರಾವ್ ಅವರು ಟವಲ್ ಬಳಸಿ ಹಿಂದಿನಿಂದ ಹೋಗಿ ಹತ್ಯೆ ಮಾಡಿದ್ದಾರೆ. ಬಳಿಕ ಅದೇ ಅಪಾರ್ಟ್‌ಮೆಂಟ್ನಲ್ಲಿ ವಾಸಿಸುತ್ತಿದ್ದ ಓರ್ವರಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

ಬಳಿಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಪಾರ್ಟ್‌ಮೆಂಟ್‌ನಲ್ಲಿರುವ ವೈದ್ಯರೂ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಮಾಹಿತಿಯ ಅನ್ವಯ ಪ್ರಕರಣ ದಾಖಲು ಮಾಡಿ ನಾಗಲೇಶ್ವರ ರಾವ್ ಅವರನ್ನು ಬಂಧನ ಮಾಡಲಾಗಿದೆ.

 

Related Articles

Back to top button
error: Content is protected !!