ಇತರೆ

ಕೆರೆಯಲ್ಲಿ ಈಜಲು ತೆರಳಿ ಇಬ್ಬರು SSLC ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

Views: 60

ಬೆಂಗಳೂರು: ಈಜಲು ಬಂದ ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಆಗರ ಕೆರೆಯಲ್ಲಿ ನಡೆದಿದೆ. ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಒಟ್ಟು 11 ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಆಗರ ಕೆರೆಯಲ್ಲಿ ಈಜಲು ಹೋಗಿದ್ದರು. ಇವರೆಲ್ಲ ಕೆಂಗೇರಿ ಉಪನಗರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಈಜಲು ನೀರಿಗೆ ಇಳಿದಿದ್ದ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ.

ಪೃಥ್ವಿರಾಜ್, ನವೀನ್ ಮೃತ ವಿದ್ಯಾರ್ಥಿಗಳು. ಇಬ್ಬರು ಹುಡುಗರು ದೊಡ್ಡಬೆಲೆ ಮೂಲದವರು ಎನ್ನಲಾಗಿದೆ. ದುರ್ಘಟನಾ ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Related Articles

Back to top button