ಕೆಂಪು ಸೀರೆಯಲ್ಲೇ ಬೋಲ್ಡ್ ಆಗಿ ಕಾಣಿಸಿಕೊಂಡ ಮಿಥುನ ರಾಶಿ ಸೀರಿಯಲ್ ನಟಿ ವೈಷ್ಣವಿ!.. ಫುಲ್ ಶಾಕ್ ಆದ ಫ್ಯಾನ್ಸ್

Views: 204
ಕನ್ನಡ ಕರಾವಳಿ ಸುದ್ದಿ: ಮಿಥುನ ರಾಶಿ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ವೈಷ್ಣವಿ ಕನ್ನಡದಲ್ಲಿ ಮಾಡಿರೋದು ಒಂದೇ ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.
ನಂತರ ಮಿನಿ ಬಿಗ್ ಬಾಸ್ನಲ್ಲೂ ಕಾಣಿಸಿಕೊಂಡಿದ್ರು. ಅಲ್ಲಿಂದ ತೆಲುಗು, ತಮಿಳು ಹಾಗೂ ಮಲಯಾಳಂ ಕಡೆ ಮುಖ ಮಾಡಿದ್ರು ನಟಿ.
ಹೈದ್ರಾಬಾದ್ ನಲ್ಲಿ ಸೆಟಲ್ ಆಗಿರುವ ನಟಿ, ಶೂಟಿಂಗ್ ಗ್ಯಾಪ್ ನಲ್ಲಿ ಬೆಂಗಳೂರಿಗೆ ಬರುತ್ತಾ ಇರುತ್ತಾರೆ. ಯಾವುದೇ ಕನ್ನಡದ ಪ್ರಾಜೆಕ್ಟ್ ಗಳನ್ನು ಸದ್ಯ ಮಾಡ್ತಿಲ್ಲ. ಇನ್ನೂ ಇತ್ತೀಚೆಗೆ ಇವರು ಮಾಡಿಸಿದ ಫೋಟೋ ಶೂಟ್ ಸದ್ದು ಮಾಡ್ತಿದೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಬೋಲ್ಡ್ ಆಗಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ ನಟಿ. ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ನಟಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ.
ಮಿಥುನ ರಾಶಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಕಾಣಿಸಿಕೊಂಡಿದ್ದ ಕೋಳಿ ರಮ್ಯಾ, ಸದ್ಯ ಬಾಯ್ಸ್ ವರ್ಸಸ್ ಗರ್ಲ್ಸ್ನಲ್ಲಿ ಭಾಗಿಯಾಗಿದ್ದಾರೆ. ಇವ್ರು ಕೂಡ ಅಕ್ಕಪಕ್ಕದ ಭಾಷೆಯಲ್ಲಿ ಬ್ಯುಸಿಯಾಗಿದ್ದ ಕಲಾವಿದೆ. ಸದ್ಯ ಶೋ ಮೂಲಕ ವೀಕ್ಷಕರ ಮುಂದೆ ಬಂದಿದ್ದಾರೆ. ಶಿವರಾತ್ರಿ ಪ್ರಯುಕ್ತ ಕ್ಲಾಸಿಕಲ್ ಮ್ಯೂಸಿಕ್ಗೆ ಹೆಜ್ಜೆ ಹಾಕಿದ್ದಾರೆ.
ನಮ್ಮ ಭಾಷೆ ಕಲಾವಿದರು ಹೆಸರು ಜೊತೆಗೆ ಕೀರ್ತಿ ಸಂಪಾದನೆ ಮಾಡ್ತಿರೋದು ಹೆಮ್ಮೆ ಪಡಬೇಕಾಗಿರೋ ವಿಚಾರ ಅಲ್ವಾ.