ಜನಮನ
ಕುಂದಾಪುರ: ರೈಲಿನಲ್ಲಿ1.50 ಲಕ್ಷ ರೂ. ಬೆಲೆಬಾಳುವ ಐಫೋನ್ ಕಳವು

Views: 94
ಕುಂದಾಪುರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಐಫೋನ್ ಕಳವಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ಮುಹಮ್ಮದ್ ಮುನ್ಸೀರ್(24) ಎಂಬವರು ಗಂಗಾನಗರ-ಕೊಚುವೇಲಿ ಎಕ್ಸ್ಪ್ರೆಸ್ ರೈಲಿನಲ್ಲಿ ಮಡಗಾಂವ್ನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದು ರೈಲು ಕುಂದಾಪುರಕ್ಕೆ ತಲುಪಿದಾಗ 1.50 ಲಕ್ಷ ರೂ.ಗಳ ಐಫೋನ್ 16 ಪ್ರೊ ಮೊಬೈಲ್ ಕಳವಾಗಿರುವುದು ಗಮನಕ್ಕೆ ಬಂತು.ಮುನ್ಸಿರ್ ಕಾಸರಗೋಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದನ್ನು ಕುಂದಾಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.






