ಇತರೆ

ಕುಂದಾಪುರ: ಬಸ್ರೂರಿನಲ್ಲಿ ಆಟೋ ರಿಕ್ಷಾ ಡಿಕ್ಕಿ: ಸೈಕಲ್ ಸವಾರನಿಗೆ ಗಂಭೀರ ಗಾಯ

Views: 102

ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರ – ಕುಂದಾಪುರ ರಾಜ್ಯ ಹೆದ್ದಾರಿಯ ಬಸ್ರೂರಿನಲ್ಲಿ ಸೈಕಲ್‌ಗೆ ಸಂದೀಪ್ ಶೆಟ್ಟಿ ಎಂಬುವವರ ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಸಂತೋಷ ಡಿ’ಸೋಜಾ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.

ಆಟೋ ರಿಕ್ಷಾ ಡಿಕ್ಕಿಯ ರಭಸಕ್ಕೆ ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡ ಸಂತೋಷ ಅವರನ್ನು ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!