ಕರಾವಳಿ

ಕುಂದಾಪುರ: ‘ಪ್ಲೇಸೆಂಟ್’ ಸಂಸ್ಥೆಯ ಅಬ್ದುಲ್ ಬಶೀರ್ ಕೋಟ ಹಾಗೂ ಇಬ್ರಾಹಿಂ ಕೋಟ ರವರಿಗೆ “ಇನ್ಸ್ಪರಿಂಗ್ ಬಿಸಿನೆಸ್ ಮ್ಯಾನ್” ಪ್ರಶಸ್ತಿ

Views: 40

ಕುಂದಾಪುರ :ಜೆಸಿಐ ಕುಂದಾಪುರ ಸಿಟಿ ವತಿಯಿಂದ, ಕುಂದಾಪುರ ಪರಿಸರದಲ್ಲಿ ಸತತ 20 ವರ್ಷಗಳಿಂದ ಪ್ಲೇಸೆಂಟ್ ಎಂಬ ಗೃಹ ಉಪಯೋಗಿ ವಸ್ತುಗಳ ಮಾರಾಟ ಮಳಿಗೆ ಸಂಸ್ಥೆಯನ್ನು ನಡೆಸುತ್ತಿರುವ ಸಂಸ್ಥೆಯ ಪಾಲುದಾರರಾದ ಅಬ್ದುಲ್ ಬಶೀರ್ ಕೋಟ ಹಾಗೂ ಕೋಟ ಇಬ್ರಾಹಿಂ ಇವರಿಗೆ “ಇನ್ಸ್ಪರಿಂಗ್ ಬಿಸಿನೆಸ್ ಮ್ಯಾನ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಕುಲಾಲ್ ರವರು ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜೆಸಿಐನ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷ ಡಾಕ್ಟರ್ ಸೋನಿ, ರಾಘವೇಂದ್ರ ಚರಣ ನಾವಡ ಕಾರ್ಯದರ್ಶಿ ಮಹಾರುದ್ರ, ಲೇಡಿ ಜೆಸಿ ಸಂಯೋಜಕ ರೇಷ್ಮಾ ಕೋಟ್ಯಾನ್ ಉಪಸ್ಥಿತರಿದ್ದು.

ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷ ನಾಗೇಶ್ ನಾವಡ, ಚಂದ್ರಕಾಂತ್, ಜಯಚಂದ್ರ ಶೆಟ್ಟಿ, ಗಿರೀಶ್ ಹೆಬ್ಬಾರ್, ಅಭಿಲಾಶ್ ಬಿ ಎ ಹಾಗೂ ಸದಸ್ಯರಾದ ಸಾಬೀರ್ ಪ್ರಸಾದ್ ರವರು ಉಪಸ್ಥಿತರಿದ್ದರು.

Related Articles

Back to top button