ಶಿಕ್ಷಣ

ಕುಂದಾಪುರ ಆರ್.ಎನ್.ಶೆಟ್ಟಿ ಪ.ಪೂ. ಕಾಲೇಜು : ವ್ಯಕ್ತಿತ್ವ ವಿಕಸನ ತರಬೇತಿ.

Views: 4

ಕುಂದಾಪುರ: ವೃತ್ತಿಪರ ವಿದ್ಯೆಯಲ್ಲಿ ಪರಿಣತಿಯನ್ನು ಪಡೆದು ತನ್ನ ಬೆಳವಣಿಗೆಯ ಮೂಲಕ ಇತರರ ಯಶಸ್ಸಿಗೂ ಸಹಕಾರಿಯಾಗಬೇಕು‌. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಳೆಯ ಪ್ರಾಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಜೆ.ಸಿ. ಐ ಉಪ್ಪುಂದ ಇದರ ವತಿಯಿಂದ ಕುಂದಾಪುರದ ಆರ್‌. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆ.ಸಿ ವಲಯ XV ರ ತರಬೇತುದಾರರಾದ ಡಾ. ಜಗದೀಶ್ ಜೋಗಿ ಅವರು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಯುವ ವಿದ್ಯಾರ್ಥಿಗಳಲ್ಲಿ ವೈಚಾರಿಕ ಬೆಳವಣಿಗೆಯನ್ನು ತರುವ ಸದುದ್ದೇಶ ಹೊಂದಿರುವ ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ತಿಳಿಸಿದರು.

ಜೆ.ಜೆ.ಸಿ ಘಟಕದ ಅಧ್ಯಕ್ಷೆಯಾದ ನಿಶಾ ಸಂತೋಷ್ ಶೆಟ್ಟಿ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೆ.ಸಿ.ಐ ಉಪ್ಪುಂದ ಘಟಕದ ಅಧ್ಯಕ್ಷರಾದ ಜೆಎಫ್ ಪಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಜೆ.ಸಿ.ಐ ಉಪ್ಪುಂದ ಇದರ ಪೂರ್ವಾಧ್ಯಕ್ಷರಾದ ಶ್ರೀ ಮಂಗೇಶ್ ಶಾನುಭಾಗ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಾಗರಾಜ ಪೂಜಾರಿ‌ ಹಾಗೂ ಕುಂದಾಪುರ ಜೆ.ಸಿ ಯ ಕಾರ್ಯದರ್ಶಿ ಶ್ರಿ ರಾಕೇಶ್ ಶೆಟ್ಟಿಯವರು ಉಪಸ್ಥಿತರಿದ್ದರು.

. ಜ್ಯೂನಿಯರ್ ಜೆ.ಸಿ ಸದಸ್ಯೆ ಅಸ್ಮಿತಾ ಇವರು ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು. ಜ್ಯೂನಿಯರ್ ಜೆ.ಸಿ ಸದಸ್ಯ ಸುಮಿತ್ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು.

Related Articles

Back to top button