ಕುಂದಾಪುರದ ‘ಕಾಂತಾರ’ ರಿಷಬ್ ಶೆಟ್ಟಿ ಬಾಲಿವುಡ್‌ಗೆ?

Views: 114
ಕುಂದಾಪುರ: ರಿಷಬ್ ಶೆಟ್ಟಿ ಅವರ ಸಿನಿಮಾ ಬದುಕಿಗೆ ದೊಡ್ಡ ತಿರುವು ನೀಡಿದೆ. ಹೀಗಿದ್ದಾಗಲೇ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾ ರಂಗದಲ್ಲಿ, ದೊಡ್ಡ ಹೆಸರು ಮಾಡಿರುವ ನಿರ್ದೇಶಕರ ಜೊತೆಗೆ, ರಿಷಬ್ ಶೆಟ್ಟಿ ಅವರು ಕಾಣಿಸಿದ್ದಾರೆ!
ರಿಷಬ್ ಶೆಟ್ಟಿ ಅವರು ಏನೇ ಮಾಡಿದ್ರೂ ವಿಶಿಷ್ಟವಾಗಿ ಮಾಡ್ತಾರೆ. ಹೀಗಾಗಿ ಅವರ ಸಕ್ಸಸ್ ರೇಟ್ ತುಂಬಾ ಜಾಸ್ತಿ ಇದೆ. ಪ್ರತಿ ಹೆಜ್ಜೆಯಲ್ಲೂ ಅವರು ಅದ್ಭುತವಾದ ಆಯ್ಕೆಯ ಎದುರು ನೋಡುತ್ತಾರೆ.
ರಿಷಬ್ ಶೆಟ್ಟಿ ಈಗ ಬಾಲಿವುಡ್‌ಗೆ ಹೋಗ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಅದೊಂದು ವಿಡಿಯೋ & ಫೋಟೋ! ಅರೆರೆ, ಒಂದು ಫೋಟೋ & ವಿಡಿಯೋ ಮೂಲಕ ಇದನ್ನು ಹೇಗೆ ಡಿಸೈಡ್ ಮಾಡೋದಕ್ಕೆ ಆಗುತ್ತೆ? ಅನ್ನೋ ಪ್ರಶ್ನೆ ಕಾಡ್ತಾ ಇದೆಯಾ? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಕಾಂತಾರ ಅಬ್ಬರಕ್ಕೆ ಜಗತ್ತು ತತ್ತರ! : ಅಂದಹಾಗೆ 2022 ರಲ್ಲಿ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅಭಿನಯಿಸಿ & ನಿರ್ದೇಶನ ಮಾಡಿದ್ದ ಕಾಂತಾರ ಸಿನಿಮಾ, ಭಾರಿ ದೊಡ್ಡ ಸಕ್ಸಸ್ ಕಂಡಿದೆ. ಈ ಸಿನಿಮಾ ಮೂಲಕ ರಿಷಬ್ ಇದೀಗ ಪ್ಯಾನ್ ಇಂಡಿಯಾ ಮೀರಿ, ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಸದ್ಯ ರಿಷಬ್, ‘ಕಾಂತಾರಾ ಎ ಲೆಜೆಂಡ್: ಅಧ್ಯಾಯ 1’ರ ನಿರ್ಮಾಣದಲ್ಲಿ ಬ್ಯುಸಿ. ಅದಕ್ಕೆ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆಯೇ ರಿಷಬ್ ಶೆಟ್ಟಿ, ಬಾಲಿವುಡ್‌ನ ಖ್ಯಾತ ನಿರ್ದೇಶಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ!
ಮುಂಬೈನಲ್ಲಿ ಮಹಾ ಮಾತುಕತೆ?
ರಿಷಬ್ ಶೆಟ್ಟಿ ಕಾಂತಾರ ಪ್ರಿಕ್ವೇಲ್ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ, ಜನವರಿ 12 ರಂದು ಮುಂಬೈನಲ್ಲಿ, ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಕಚೇರಿಗೂ ಭೇಟಿ ನೀಡಿದ್ದಾರೆ. ಇದು ಅವರ ಬಾಲಿವುಡ್ ಪಾದಾರ್ಪಣೆ ಬಗ್ಗೆ ಗಾಸಿಪ್ ಎಬ್ಬಿಸಿದೆ ಹಿಂದಿಯ ಸಿನಿಮಾ ರಂಗದಲ್ಲಿ ಅಶುತೋಷ್ ಗೋವಾರಿಕರ್ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಇವರು ಲಗಾನ್, ಸ್ವದೇಶ್ ಸಿನಿಮಾಗಳ ಮೂಲಕ ಹೆಸರು ಮಾಡಿದ್ದರು. ಈಗ ರಿಷಬ್ ಶೆಟ್ಟಿ ಅವರು ಬಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ.
ಕಾಂತಾರ ಮೂಲಕ ಕಮಾಲ್ ಮಾಡಿರುವ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ, ಮತ್ತೆ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ ಅದ್ರಲ್ಲೂ ಕಾಂತಾರ ಮುಂದುವರಿದ ಭಾಗ ಭಾರಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ ಸಿನಿಮಾ ತಂಡ. ಈ ಮೂಲಕ ಕನ್ನಡಿಗರ ಸಿನಿಮಾಗಾಗಿ ಇಡೀ ದೇಶ ಮತ್ತು ಇಡೀ ಜಗತ್ತೇ ಕಾಯುತ್ತಿದೆ.
ಕೆಜಿಎಫ್ & ಕಾಂತಾರ ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿಯ ಖದರ್‌ನ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿ ಗತ್ತನ್ನೇ ಬದಲಿಸಿವೆ. ಮುಂದಿನ ಕೆಲ ವರ್ಷಗಳ ಕಾಲ, ಕನ್ನಡ ಸಿನಿಮಾ ಇಂಡಸ್ಟ್ರಿ ಜಾಗತಿಕವಾಗಿ ಮಿಂಚುವುದು ಗ್ಯಾರಂಟಿ ಎಂಬ ಮಾತು ಫ್ಯಾನ್ಸ್ ಬಾಯಿಂದ ಕೇಳಿಬರುತ್ತಿದೆ. ಹಿಂದಿ ಭಾಷಿಕರಿರುವ ಜಾಗದಲ್ಲಿ ಕೂಡ ಕನ್ನಡಿಗರ ಸಿನಿಮಾ ಅಬ್ಬರಿಸುತ್ತಿವೆ.
ಒಟ್ನಲ್ಲಿ ಕಾಂತಾರ ದೊಡ್ಡ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಸಮಯದಲ್ಲೇ, ಕುಂದಾಪುರದ ಹುಡುಗ ರಿಷಬ್ ಶೆಟ್ಟಿ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರಾ? ಅನ್ನೋ ಸಂತಸದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.