ಕಾವೇರಿ ವಿಚಾರದಲ್ಲಿ ಮತ್ತೆ ಹಿನ್ನಡೆ: ಅ.15ರವೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಬಿಡಲೇಬೇಕು ಎಂದ ನಿರ್ವಹಣಾ ಪ್ರಾಧಿಕಾರ

Views: 0
ಕರ್ನಾಟಕ ಬಂದ್ ನಡುವೆಯೇ ರಾಜ್ಯಕ್ಕೆ ಮತ್ತೆ ಶಾಕ್ ಎದುರಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂ ಎಂಎ), ತಮಿಳುನಾಡಿಗೆ ಅ. 15ರವರೆಗೆ ದಿನಕ್ಕೆ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚಿಸಿದೆ.
ಸೆ. 26ರಂದು ನಡೆದಿದ್ದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು (ಸಿಡಬ್ಲ್ಯೂಆರ್ ಸಿ) ಸೆ. 27ರಿಂದ ಅ. 15ರವರೆಗೆ ದಿನನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಹೊರಡಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಕರ್ನಾಟಕ ಸರ್ಕಾರ, ಕಾವೇರಿ ನೀರು ನಿಯಂತ್ರಣ ಸಮಿತಿಗೂ ಮೇಲ್ಪಟ್ಟದ ಸಂಸ್ಥೆಯಾದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿ, ನಿಯಂತ್ರಣ ಸಮಿತಿಯು ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೇಳಿತ್ತು.
ಮತ್ತೊಂದೆಡೆ ನಿಯಂತ್ರಣ ಸಮಿತಿಯ ಆದೇಶದಿಂದ ತಮಿಳುನಾಡು ಸಹ ಪ್ರಾಧಿಕಾರದ ಮೊರೆಹೋಗಿ, ತನಗೆ ಕರ್ನಾಟಕದಿಂದ ದಿನಕ್ಕೆ 12,500 ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಬೇಕು ಎಂದು ಅಹವಾಲು ಸಲ್ಲಿಸಿತ್ತು.
ಕರ್ನಾಟಕ ಹಾಗೂ ತಮಿಳುನಾಡಿನ ವಾದಗಳನ್ನು ಆಲಿಸಲು ಸೆ. 29ರಂದು ಮಧ್ಯಾಹ್ನ ಸಭೆ ನಡೆಸಿದ ಪ್ರಾಧಿಕಾರ, ಸೆ. 26ರಂದು ನಿಯಂತ್ರಣ ಸಮಿತಿ ನೀಡಿದ್ದ ತೀರ್ಪನ್ನೇ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದಾಗಿ, ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕಕ್ಕೆ ತೀವ್ರ ಹಿನ್ನೆಡೆಯಾಗಿದೆ.