ಶಿಕ್ಷಣ

ಕಾಲೇಜು ಪ್ರಾರಂಭದ ಮೂರನೇ ವರ್ಷದಲ್ಲೇ ಅಪ್ರತಿಮ ಸಾಧನೆಗೈದು ಮನೆಮಾತಾದ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು

Views: 541

ಕನ್ನಡ ಕರಾವಳಿ ಸುದ್ದಿ: ಕಾಲೇಜು ಪ್ರಾರಂಭದ ಮೂರನೇ ವರ್ಷದಲ್ಲೇ ಅಪ್ರತಿಮ ಸಾಧನೆಗೈದು ಮನೆಮಾತಾದ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೈನ್ಸ್ 2025 ಪ್ರವೇಶ ಪರೀಕ್ಷೆಯಲ್ಲಿ 98 ಪರ್ಸಂಟೈಲ್ ಗಿಂತ ಅಧಿಕ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ಮೂರನೇ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ.

ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ, ಜೆಇಇ ಮೈನ್ಸ್ 2025ರ ಮೊದಲನೇ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿ ಗಿರೀಶ್ ಪೈ 98.921 ಪರ್ಸಂಟೈಲ್, ನಿಶ್ಚಿತ್ 98.674 ಪರ್ಸಂಟೈಲ್, ಆಕಾಶ್ ಹೆಬ್ಬಾರ್ 98.078 ಪರ್ಸಂಟೈಲ್, ಧೀರಜ್ ಜಿ.ಡಿ.97.787ಪರ್ಸಂಟೈಲ್,

ಚಿರಂತನ್ 95.866 ಪರ್ಸಂಟೈಲ್,ಶಶಾಂಕ್ 93.722 ಪರ್ಸಂಟೈಲ್,ಪ್ರಸಾದ್ 93.701 ಪರ್ಸಂಟೈಲ್,ಶ್ರದ್ಧಾ 93.155,ಪರ್ಸಂಟೈಲ್, ಲಿಖಿತ್ 90.789 ಪರ್ಸಂಟೈಲ್,ರಿಯಾನ್ 90.563‌ ಪರ್ಸಂಟೈಲ್,ಅನಿರುದ್ದ್ 90.329 ಪರ್ಸಂಟೈಲ್ ಪಡೆದು ಜೆಇಇ ಅಡ್ವನ್ಸ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button