ಇತರೆ
ಕಾರು- ಖಾಸಗಿ ಬಸ್ಸು ಡಿಕ್ಕಿ: ನಜ್ಜುಗುಜ್ಜಾದ ಕಾರು

Views: 0
ಖಾಸಗಿ ಬಸ್ ಮತ್ತು ಕಾರು ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಸಮೀಪ ಘಟನೆ ಸಂಭವಿಸಿದೆ.
ಕುಟುಂಬದ ಸದಸ್ಯರು ಕುಂದಾಪುರ ತಾಲೂಕಿನ ಹಾಲಾಡಿಯಿಂದ ಕಾರಿನಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ತೆರಳುತ್ತಿದ್ದರು. ಖಾಸಗಿ ಬಸ್ ತೀರ್ಥಳ್ಳಿಯಿಂದ ಬಿದರಗೋಡು ಕಡೆಗೆ ಹೋಗುತ್ತಿದ್ದ ವೇಳೆ ಮೇಗರವಳ್ಳಿ ಸಮೀಪ ಪರಸ್ಪರ ಡಿಕ್ಕಿಯಾಗಿದೆ. ಕಾರು ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ ಘಟನೆ ವೇಳೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಬಸ್ಸಿನ ಎಡ ಭಾಗಕ್ಕೂ ಹಾನಿಯಾಗಿದೆ. ಗಾಯಗೊಂಡವರನ್ನು ಮೇಘರವಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.