ಇತರೆ
ಕಾರನ್ನು ಅಡ್ಡಗಟ್ಟಿ ಹಣ ಲೂಟಿ ಮಾಡಿ ಪರಾರಿಯಾದ ಗ್ಯಾಂಗ್

Views: 440
ಕನ್ನಡ ಕರಾವಳಿ ಸುದ್ದಿ: ಹಾಡ ಹಗಲೇ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಹಣ ದರೋಡೆ ಮಾಡಿಕೊಂಡು ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಉದ್ಯಮಿಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದ ಮುಸುಕುಧಾರಿ ದರೋಡೆಕೋರರ ಗ್ಯಾಂಗ್ ಕಾರನ್ನು ಅಡ್ದಗಟ್ಟಿ ಹಣ ಕಸಿದುಕೊಂಡು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಮಂಕಿಕ್ಯಾಪ್ ಧರಿಸಿಕೊಂಡು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಬಂದಿರುವ ಗ್ಯಾಂಗ್ ಮೈಸೂರು ಹೊರವಲಯದ ಹಾರೋಹಳ್ಳಿ ಬಳಿ ಕಾರು ತಡೆದು ಹಣವನ್ನು ದೋಚಿ ಪರಾರಿಯಾಗಿರುವ ದೃಶ್ಯ ಸ್ಥಳಿಯರೊಬ್ಬರ ಮೊಬೈಲ್ ಕ್ಯಾಮರದಾಲ್ಲಿ ಸೆರೆಯಾಗಿದೆ. ಕಳೆದ ಒಂದು ವಾರದಲ್ಲಿ ಹಾಡ ಹಗಲೇ ನಡೆಯುತ್ತಿರುವ ದರೋಡೆ ಪ್ರಕರಣ ರಾಜ್ಯದ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಈವರೆಗೂ ಯಾರೊಬ್ಬ ಆರೋಪಿಗಳ ಸುಳಿವನ್ನು ಪೊಲೀಸರು ಪತ್ತೆ ಮಾಡಲು ಸಾಧ್ಯವಾಗಿಲ್ಲ.