ಕಾಂತೇಶ್ ನಿಗೆ ಟಿಕೆಟ್ ಮಿಸ್, ಯಡಿಯೂರಪ್ಪ ಬಣದ ವಿರುದ್ಧ ತೊಡೆ ತಟ್ಟಿದ ಈಶ್ವರಪ್ಪ ..!

Views: 60
ಶಿವಮೊಗ್ಗ ಬಿಜೆಪಿಯಲ್ಲಿ ಬಂಡಾಯ ಶಮನಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ತನ್ನ ಮಗನಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ಕೋಪಗೊಂಡಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ, ಯಡಿಯೂರಪ್ಪ ಬಣದ ವಿರುದ್ದ ತೊಡೆ ತಟ್ಟಿದ್ದಾರೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸಲು ಈಶ್ವರಪ್ಪ ಅಣಿಯಾಗಿದ್ದು, “ಶಿವಮೊಗ್ಗದಲ್ಲಿ ರಾಘವೇಂದ್ರ ಸೋಲ್ತಾರೆ. ಇನ್ನು ಎಲ್ಲೆಲ್ಲಿ ಯಾರೆಲ್ಲ ಸೋಲ್ತಾರೆ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಯಡಿಯೂರಪ್ಪ ಬಣ ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಈಶ್ವರಪ್ಪ, ಶಿಕಾರಿಪುರದಲ್ಲಿ ನಾಗಾರಾಜ ಗೌಡನನ್ನು ತೆಗೆದ್ರು. ಮತ್ತೋರ್ವ ಹಿಂದುಳಿದ ವರ್ಗದ ಗೂಲಿ ಮಹಾಂತೇಶ್ ಅವರನ್ನು ತೆಗೆದ್ರು. ಇವೆಲ್ಲ ಕಾಂಗ್ರೆಸ್‌ಗೆ ಲಾಭ ಮಾಡಿ ಕೊಡಲು ಎಂದಿದ್ದಾರೆ.
ಧರ್ಮ ಅಂದ್ರೆ ಜಾತಿ ಸೀಮಿತ ಅಲ್ಲ. ನಮ್ಮದು ಧರ್ಮ ಯುದ್ದ. ಈ ಯುದ್ದದಲ್ಲಿ ದುಡ್ಡು, ಜಾತಿ ಸೋಲಲಿದೆ. ಧರ್ಮ ಗೆಲ್ಲಲಿದೆ. ಯಡಿಯೂರಪ್ಪ ಬಣಕ್ಕೆ ಬಿಜೆಪಿ ಕಾರ್ಯಕರ್ತರು ಅವರ ಜೊತೆ ಇದ್ದಾರೆ ಎಂಬ ಭಾವನೆಯಿದೆ. ಆದರೆ, ಕಾರ್ಯಕರ್ತರು ನಮ್ಮ ಜೊತೆಯಿದ್ದಾರೆ ಎಂದು ಹೇಳಿದ್ದಾರೆ.
ನಾನು ಸಾಮಾನ್ಯ ಜನರ ಕೈಗೆ ಸಿಗುವ ವ್ಯಕ್ತಿ. ಜನರು ಫೋನ್ ಮಾಡಿದ್ರೆ ನಾನು ಎತ್ತುತ್ತೇನೆ. ನನಗೆ ಅನ್ಯಾಯವಾಗಿದೆ ಎಂಬ ಭಾವನೆ ಜನರಲ್ಲಿ ಇದೆ. ನಾನು ಹಿಂದುತ್ವವಾದಿ. ರಾಘವೇಂದ್ರ ಅಂಡ್ ಕಂಪನಿ ನನ್ನ ಬೆಂಬಲಿಗರಿಗೆ ಫೋನ್ ಮಾಡಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.