ಕರಾವಳಿ

‘ಕಾಂತಾರ’ದಂತೆ ನೈಜ್ಯ ಘಟನೆ ಮಂಗಳೂರಿನಲ್ಲಿ.. ತಂದೆ ಸಾವಿನ ಬಳಿಕ ದೈವದ ಅನುಮತಿಯಂತೆ ನರ್ತಕರಾದ ಮಕ್ಕಳು!

Views: 75

ಮಂಗಳೂರು: . ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ ಕಾಂತಾರ. ಇದೇ ರೀತಿ ತುಳುನಾಡಿನ ದೈವದ ಕಥಾ ಕಂದರ ಇರುವ ಚಿತ್ರವನ್ನು ನೆನಪಿಸುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.

ಎಡಮಂಗಲದ ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ ನರ್ತಕ ಕಾಂತು ಅಜಿಲರು, 2023 ರಮಾರ್ಚ್ 30ರಂದು, ದೈವ ನರ್ತನದಲ್ಲಿದ್ದ ವೇಳೆಯೇ ಅಕಾಲಿಕ ಮೃತಪಟ್ಟಿದ್ದರು. ಕಾಂತು ಅಜಿಲರ ಸಾವಿನ ಬಳಿಕ ಗ್ರಾಮದ ಜನತೆ ಹೊಸ ದೈವನರ್ತಕನ ಹುಡುಕಾಟದಲ್ಲಿದ್ದರು. ಅದಕ್ಕಾಗಿ ದೈವಜ್ಞರಿಂದ ಪ್ರಶ್ನೆಯನ್ನು ಇರಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಕಾಂತು ಅಜಿಲರ ಮಕ್ಕಳನ್ನೇ ಮುಂದಿನ ದೈವನರ್ತಕರಾಗಿಸಿಬೇಕು ಎಂದು ಹೇಳಿದ್ದಾರೆ.

ಅದರಂತೆ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಗಿದೆ. ಇದಕ್ಕೆ ಶಿರಾಡಿ ದೈವದ ಅನುಮತಿಯೂ ದೊರಕಿದ್ದು, ದೈವದ ಮುಂದೆ ದೈವ ನರ್ತನದ ಜವಾಬ್ದಾರಿ ಕೊಡಲಾಯಿತು. ಕಾಂತಾರದಲ್ಲೂ ಚಿತ್ರದ ಕೊನೆಗೆ, ಮಾಯವಾದ ಪಂಜುರ್ಲಿ ದೈವದ ನರ್ತಕನ‌ ಮಗ ಶಿವನೇ ಮತ್ತೆ ಪಂಜುರ್ಲಿ ದೈವದ ನರ್ತನ ಸೇವೆ ಸಲ್ಲಿಸಿದ ಚಿತ್ರ ಕಥೆ ನೆನಪಿಸಿದೆ.

Related Articles

Back to top button