ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ವೇದಿಕೆ ಸಿದ್ಧ

Views: 0
ತತ್ವ ಸಿದ್ಧಾಂತ, ಭಿನ್ನಾಭಿಪ್ರಾಯಗಳನ್ನ ಮೀರಿ ಬಿಜೆಪಿಯನ್ನು ಸೋಲಿಸುವುದೊಂದೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆ ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದೆ.
ಲೋಕಸಭಾ ಚುನಾವಣೆ 1 ವರ್ಷಕ್ಕೂ ಕಡಿಮೆ ಅವಧಿ ಇರುವಾಗಲೇ ಬಿಜೆಪಿ ವಿರುದ್ಧ ಹೋರಾಡಲು ಸಜ್ಜಾಗಿರುವ ಪ್ರತಿಪಕ್ಷಗಳ ಸಭೆ ಸಜ್ಜಾಗಿದ್ದು .23 ಪಕ್ಷಗಳು ಭಾಗವಹಿಸಲಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಪಾಟ್ನಾದಲ್ಲಿ ಈ ಹಿಂದೆ ನಡೆದ ಸಭೆಯಲ್ಲಿ ಹಲವು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಎರಡನೇ ಸುತ್ತಿನ ಮಾತುಕತೆ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸೀಟು ಹಂಚಿಕೆ, ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಯಾರನ್ನು ಬಿಂಬಿಸಬೇಕು ಎನ್ನುವ ವಿಷಯಗಳ ಚರ್ಚೆ ನಡೆಯಲಿದೆ.
ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ 15 ಪಕ್ಷಗಳು ಭಾಗವಹಿಸಿದ್ದು, ಈ ಬಾರಿ 24 ಪಕ್ಷಗಳು ಭಾಗವಹಿಸಲಿದೆ ,ಆದರೆ,ಅಂತಿಮವಾಗಿ ಈ ಸಂಖ್ಯೆ 23ಕ್ಕೆ ಇಳಿದಿದೆ. ಈ ಸಭೆಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಹಿಂದೆ ಪಾಟ್ನಾ ದಲ್ಲಿ ನಡೆದ ಸಭೆಗೆ ಜೆಡಿಎಸ್ ಗೆ ಆಹ್ವಾನ ಇರಲಿಲ್ಲ.ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಅಧಿಕೃತ ಆಹ್ವಾನ ಇಲ್ಲದೆ ಇರುವುದರಿಂದ ಆ ಸಭೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಮೂಲಗಳು ತಿಳಿಸಿದೆ.
ಮೈತ್ರಿಕೂಟದ ಸಂಚಾಲಕತ್ವ, ಮುಂದಿನ ಕಾರ್ಯತಂತ್ರ, ಸಮಾನ ಕಾರ್ಯಕ್ರಮಗಳು, ಕೂಟದ ಹೆಸರು ಅಂತಿಮಗೊಳಿಸಲು ಪ್ರಯತ್ನ ನಡೆಯಲಿದೆ. ಉಳಿದಂತೆ ಕೂಟದ ಸದಸ್ಯರ ಮಧ್ಯೆ ಇರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಪ್ರಯತ್ನ ನಡೆಯಲಿದೆ ಎಂದು ತಿಳಿದು ಬಂದಿದೆ.