ಕಲಾಪೋಷಕ ಬೀಜಾಡಿ ಮಂಜುನಾಥ ಶೆಟ್ಟಿಗಾರರಿಗೆ ನುಡಿ ನಮನ

Views: 111
ಕನ್ನಡ ಕರಾವಳಿ ಸುದ್ದಿ: ಪುಷ್ಪ ಪವಾಡ ಖ್ಯಾತಿಯ ಸೌಕೂರು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯನ್ನು ನಿರಂತರ 35 ವರ್ಷಗಳ ಪರ್ಯಂತ ಪ್ರದರ್ಶನವನ್ನು ಮಾಡಿದ್ದಲ್ಲದೆ ಬೇರೆ ಬೇರೆ ಮೇಳದವರಿಂದ 50ಕ್ಕೂ ಮಿಕ್ಕಿ ಯಕ್ಷಗಾನ ಪ್ರದರ್ಶನವನ್ನು ಮಾಡಿ ನೂರಾರು ಕಲಾವಿದರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ಕೋಟೇಶ್ವರ ಬೀಜಾಡಿ ಮಂಜುನಾಥ್ ಶೆಟ್ಟಿಗಾರ್ ನಿಧನರಾಗಿ ಕೀರ್ತಿಶೇಷರ ವೈಕುಂಠ ಸಮಾರಾಧನೆ ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನುಡಿ ನಮನ ಜರಗಿತು
ಪಂಚ ಮೇಳದ ಯಜಮಾನರಾದ ಬೈಲೂರು ಕಿಶನ್ ಕುಮಾರ್ ಹೆಗ್ಡೆ, ವಾಸ್ತುತಜ್ಞ ಡಾl ಬಸವರಾಜ ಶೆಟ್ಟಿಗಾರ್ ಮಂದರ್ತಿ ಮೇಳದ ಪ್ರಧಾನ ವೇಷದಾರಿ ಕೋಡಿ ವಿಶ್ವನಾಥ ಗಾಣಿಗ, ನಿವೃತ್ತ ಎಎಸ್ಐ ಗಣಪಯ್ಯ ಶೆಟ್ಟಿಗಾರ್, ನಿವೃತ್ತ ಶಿಕ್ಷಕಿ ಇಂದಿರ ಬಿಜಾಡಿಯವರು ನುಡಿ ನಮನವನ್ನು ಸಲ್ಲಿಸಿದರು. ಕೋಟೇಶ್ವರ ಪದ್ಮಶಾಲಿ ಸಂಘದ ಗೌರವ ಅಧ್ಯಕ್ಷರಾದ ಜನಾರ್ಧನ್ ಶೆಟ್ಟಿಗಾರ ಕಾರ್ಯಕ್ರಮ ನಿರೂಪಿಸಿದರು.
ದೈವ ದೇವರುಗಳ ಮೇಲೆ ಶ್ರದ್ಧೆ, ನಿಷ್ಠೆ, ಭಕ್ತಿ ಇದ್ದಾಗ ಎಂತಹ ಸಂದಿಗ್ಧ ಪರಿಸ್ಥಿತಿ ಎದುರಾದರು ಸಹ ಧೈರ್ಯದಿಂದ ಎದುರಿಸುವ ಶಕ್ತಿಯನ್ನು ದೇವರು ಅನುಗ್ರಹಿಸುತ್ತಾನೆ. ಈ ನಿಟ್ಟಿನಲ್ಲಿ ಎಂತಹ ಕಷ್ಟಗಳು ಎದುರಾದರೂ ಎಲ್ಲವನ್ನು ದೇವರ ಮೇಲೆ ಭಾರ ಹಾಕಿ ಜೀವನ ಸಾಧಿಸಿದ ವ್ಯಕ್ತಿ ಮಂಜುನಾಥ್ ಶೆಟ್ಟಿಗಾರ್ ಎಂದು ಪಂಚ ಮೇಳದ ಯಜಮಾನರಾದ ಕಿಶನ್ ಕುಮಾರ್ ಹೆಗ್ಡೆ ಅವರು ಮೃತರಿಗೆ ನುಡಿ ನಮನ ಸಲ್ಲಿಸುತ್ತಾ ಹೇಳಿದರು.