ಇತರೆ
ಒಂದು ವರ್ಷದ ಮಗುವನ್ನು ಬಿಟ್ಟು ನೇಣಿಗೆ ಶರಣಾದ ಗೃಹಿಣಿ

Views: 127
ಬೆಂಗಳೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿರೋ ಘಟನೆ ರಾಜಗೋಪಾಲ ನಗರದ ಮೋಹನ್ ಥಿಯೇಟರ್ ಸಮೀಪದಲ್ಲಿ ನಡೆದಿದೆ. ಮೃತ ಮಹಿಳೆಯನ್ನು 22 ವರ್ಷದ ಕಾವ್ಯ ಎಂದು ಗುರುತಿಸಲಾಗಿದೆ.
ಮೃತ ಕಾವ್ಯ ತುಮಕೂರು ಜಿಲ್ಲೆ ಕುಣಿಗಲ್ ನಿವಾಸಿ. ಕಾವ್ಯ ಪೋಷಕರು ಎರಡು ವರ್ಷದ ಹಿಂದೆ ಪ್ರವೀಣ್ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ಕಾವ್ಯ, ಪ್ರವೀಣ್ ದಂಪತಿಗೆ ಒಂದು ವರ್ಷದ ಮಗು ಕೂಡ ಇದೆ. ಒಂದು ವರ್ಷದ ಮಗುವನ್ನು ಬಿಟ್ಟು ಕಾವ್ಯ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.