ಸಾಂಸ್ಕೃತಿಕ

ಎರಡನೇ ಮದುವೆ ಬಗ್ಗೆ ಮಾತನಾಡಿದ ಮೆಘನಾ ರಾಜ್‌!

Views: 316

ಕನ್ನಡ ಕರಾವಳಿ ಸುದ್ದಿ: ಎಲ್ಲರಿಗೂ ತಿಳಿದಿರುವಂತೆ ಕೆಲ ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ವಿಜಯ ರಾಘವೇಂದ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇದಾದ ಕೆಲವೇ ತಿಂಗಳಲ್ಲಿ ಕೆಲ ಸೋಶಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಮತ್ತು ವಿಜಯ ರಾಘವೇಂದ್ರ ಅವರು ಎರಡನೇ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿಗಳು ವೈರಲ್ ಆಗಿದೆ.

ಆದರೆ ಇದರ ಬಗ್ಗೆ ಯಾವತ್ತೂ ಕೂಡ ಮೇಘನಾ ರಾಜ್ ಆಗಿರಬಹುದು ಅಥವಾ ವಿಜಯ ರಾಘವೇಂದ್ರ ಮಾತನಾಡಿಲ್ಲ. ಆದರೆ ಕೊನೆಗೂ ಮೆಘನಾ ರಾಜ್ ಹಾಗೂ ವಿಜಯರಾಘವೇಂದ್ರ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.

ಮೇಘನಾ ರಾಜ್ ಈ ಪ್ರಶ್ನೆಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿ ಇಟ್ಟಿದ್ದಾರೆ. ಭವಿಷ್ಯದಲ್ಲಿ ಸಮಯ ಕೂಡಿಬಂದು ಮದುವೆ ಆಗೋದಾದ್ರೆ ಯಾರ ಒಪ್ಪಿಗೆಯನ್ನು ಮೇಘನಾ ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇದೀಗ ಮೇಘನಾ ರಾಜ್‌ ಎರಡನೇ ಮದುವೆ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದು 2ನೇ ಮದುವೆ ಬಗ್ಗೆ ಜನ ಏನು ಆಲೋಚಿಸುತ್ತಾರೆ ಎಂದು ನನಗೆ ತಿಳಿದಿಲ್ಲ. ನಾನು ಏನು ಮಾಡಬೇಕು ಎಂದುಕೊಳ್ಳುತ್ತೇನೆ ಅದು ನೆರವೇರುತ್ತಿಲ್ಲ. ಯಾವುದಾದರೂ ವ್ಯಕ್ತಿ ನನ್ನ ಜೀವನದಲ್ಲಿ ಬರುತ್ತಾನೋ ಇಲ್ವಾ ತಿಳಿದಿಲ್ಲ. ಆದರೆ ಚಿರುಗೆ ಈ ವ್ಯಕ್ತಿ ಸರಿ ಎನಿಸಿದರೆ ಅದನ್ನು ಮಾಡಿಸುತ್ತಾನೆ.. ಯಾವ ವ್ಯಕ್ತಿಯೂ ಸರಿ ಇಲ್ಲ ಅಂತಾ ಅನಿಸಿದರೆ ಚಿರು ಕಳಿಸೋದೆ ಇಲ್ಲ. ಆಗ ನಾನು ಹೀಗೇ ಇದ್ದು ಬಿಡುತ್ತೇನೆ ಎಂದು ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.

ಮೇಘನಾ ರಾಜ್ ಎರಡನೇ ಮದುವೆಯಾಗುವುದಿಲ್ಲ ಅಂತ ಅಲ್ಲ. ಹಾಗೊಂದು ವೇಳೆ ಚಿರು ಹರಸಿ ಹಾರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

 

Related Articles

Back to top button