ರಾಜಕೀಯ

ಎನ್ ಡಿಎ ಮೈತ್ರಿಕೂಟ ಬಲ ಪ್ರದರ್ಶನಕ್ಕೆ ಸಜ್ಜು

Views: 0

2024ರ ಲೋಕಸಭೆ ಚುನಾವಣೆಗಾಗಿ ಕಾರ್ಯತಂತ್ರ ರೂಪಿಸಲು ಪ್ರತಿ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಒಗ್ಗೂಡಿ ಸಭೆ ನಡೆಸುತ್ತಿರುವಾಗಲೇ ಮೈತ್ರಿಕೂಟ ಬಲ ವೃದ್ಧಿಸಿಕೊಳ್ಳಲು ಜುಲೈ 18 ರಂದು ಮಂಗಳವಾರ ದೆಹಲಿಯಲ್ಲಿ ಸಭೆ ನಡೆಯಲಿದೆ.

ಎನ್​ಡಿಎ ಸಭೆಗೆ ಆರು ಹೊಸ ಪಕ್ಷಗಳು ಸೇರಿದಂತೆ ಒಟ್ಟು 38 ಮಿತ್ರ ಪಕ್ಷಗಳ ಸಭೆಗೆ ಆಹ್ವಾನಿಸಲಾಗಿದೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ದಾ ನೇತೃತ್ವದ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಎನ್ ಡಿಎ ಇತ್ತೀಚಿಗೆ ಉತ್ತರ ಪ್ರದೇಶದಿಂದ ಎಸ್ ಬಿಎಸ್ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಸೇರ್ಪಡೆಯಾಗಿದ್ದಾರೆ.

ಮಹಾರಾಷ್ಟ್ರದ ಅಜಿತ್ ಪವರ್ ನೇತೃತ್ವದ ಎನ್‌ಸಿಪಿ ಸೇರ್ಪಡೆಗೊಂಡಿದೆ.

ಹಿಂದುಸ್ತಾನಿ ಅವಾಮ್ ಮೋರ್ಚಾದ ಜಿತನಾ ರಾಮ್ ಮಾಂಝಿ, ರಾಷ್ಟ್ರೀಯ ಲೋಕ ಸಮತಾಪಕ್ಷದ ಉಪೇಂದ್ರ ಸಿಂಗ್ ಕುಶ್ಬಾಹಾ ಮತ್ತು ವಿಕಾಸ ಶೀಲ ಇನ್ಸಾನ್ ಪಕ್ಷದ ಮುಕೇಶ್ ಸಹಾಗಿ ಅವರನ್ನು ಆಹ್ವಾನಿಸಿಸಲಾಗಿದೆ.

ಸಮಾಜವಾದಿ ಪಕ್ಷದ ಮಿತ್ರ ಪಕ್ಷವಾದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಎನ್ ಡಿಎ ಮೈತ್ರಿಕೂಟದ ಜನಪ್ರಿಯತೆ ಹೆಚ್ಚಾಗುತ್ತಿದ್ದು, ನರೇಂದ್ರ ಮೋದಿ ಸರ್ಕಾರದ ಆಡಳಿತ ಯೋಜನೆಗಳು ಇದಕ್ಕೆ ಸಹಾಯವಾಗಿದೆ. ಮಂಗಳವಾರ ನಡೆಯುವ ಸಭೆಯಲ್ಲಿ ಹಳೆಯ ಮಿತ್ರ ಪಕ್ಷಗಳು ಹೊಸದಾಗಿ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿರುವ ಪಕ್ಷಗಳು ಸೇರಿದಂತೆ 38 ಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ದಾ ಹೇಳಿದ್ದಾರೆ..

Related Articles

Back to top button