ಶಿಕ್ಷಣ
ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕಾಲೇಜಿಗೆ ಬಂದು ಆರೋಪಿಯನ್ನು ಹಿಡಿದು ಕಪಾಳಮೋಕ್ಷ ಮಾಡಿ, ಥಳಿಸಿದ ಪೋಷಕರು

Views: 117
ಕನ್ನಡ ಕರಾವಳಿ ಸುದ್ದಿ: ಅತಿಥಿ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕಾಲೇಜೊಂದರ ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆ ಕಾಲೇಜಿಗೆ ಧಾವಿಸಿದ ಪೋಷಕರು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.
ರಾಹುಲ್ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನ ಕಾಟಕ್ಕೆ ಬೇಸತ್ತ ವಿದ್ಯಾರ್ಥಿನಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ನೆರೆ ಹೊರೆಯವರೊಂದಿಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿ ಪೋಷಕರು ಉಪನ್ಯಾಸಕನನ್ನು ಹಿಡಿದು ಕಪಾಳಮೋಕ್ಷ ಮಾಡಿ, ಥಳಿಸಿದ್ದಾರೆ.
ಅಲ್ಲದೇ ಉಪನ್ಯಾಸಕನ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿ ರಾಹುಲ್ ಮೊಬೈಲ್ ನಲ್ಲಿ ಯುವತಿಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ.