ಜನಮನ

ಉಡುಪಿ: ಕಾರ್ಕಳ ಆಲಿಕಲ್ಲು ಮಳೆ, ಕುಂದಾಪುರದಲ್ಲಿ ತಂಪೆರದ ಮಳೆ 

Views: 156

ಕನ್ನಡ ಕರಾವಳಿ ಸುದ್ದಿ: ಕಳೆದ ಒಂದು ತಿಂಗಳಿನಿಂದ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಭಾರೀ ಗಾಳಿಯೊಂದಿಗೆ ಎಂಟ್ರಿ ಕೊಟ್ಟ ಮಳೆ ಕಾರ್ಕಳದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಕುಂದಾಪುರದಲ್ಲಿ ಮಳೆರಾಯ ತಂಪೆರೆದಿದ್ದಾನೆ.

ಕಾರ್ಕಳದ ಪೆರ್ವಾಜೆ ರಸ್ತೆಯ ಎಲ್‌ಐಸಿ ಕಚೇರಿ ಬಳಿ ಬಿರುಗಾಳಿಗೆ ರಸ್ತೆಗೆ ಬೃಹತ್ ಗಾತ್ರದ ಮರಬಿದ್ದು ವಿದ್ಯುತ್ ಕಂಬ ತುಂಡಾಗಿ ಸಂಚಾರಕ್ಕೆ ತೊಡಕಾಗಿದೆ.

ಅಜೆಕಾರು, ಮುನಿಯಾಲು, ಬಜಗೋಳಿ ಪರಿಸರದಲ್ಲಿ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ದಿನವಿಡೀ ಉರಿ ಬಿಸಿಲು ಸೆಕೆಯ ವಾತಾವರಣ ಇದ್ದು, ಕೆಲವು ಕಡೆ ಬೆಳಗ್ಗೆ ಮಂಜು, ಮೋಡದಿಂದ ಕೂಡಿತ್ತು. ಇದರಿಂದಾಗಿ ತಾಪಮಾನದಲ್ಲೂ ಏರಿಳಿತವಾಗುತ್ತಿದ್ದು, ಇದೀಗ ಕಾರ್ಕಳದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಗಾಳಿಯ ರಭಸಕ್ಕೆ ಹಲವು ಕಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಲವು ಕಡೆ ಅಂಗಡಿ ಹಾಗೂ ಮನೆಯ ಮೇಲ್ಟಾವಣಿ ಹಾರಿಹೋಗಿದೆ.

ಕುಂದಾಪುರದ ಕೋಟ, ಕುಂಭಾಸಿ.ಕೋಟೇಶ್ವರದಲ್ಲಿ ಅಲ್ಲಲ್ಲಿ ಮಳೆ ಸುರಿದು ತಂಪೆರಿದಿದೆ.

ಕಾರ್ಕಳ ಪೇಟೆ ಭಾಗ, ಕುಕ್ಕುಂದೂರು, ಮಿಯ್ಯಾರು, ರೆಂಜಾಲ, ಬಜಗೋಳಿ, ದಿಡಿಂಬಿರಿ, ಮಾಳ, ನೆಲ್ಲಿಕಾರು, ಕೆರ್ವಾಶೆಯಲ್ಲಿ ಮಳೆಯಾಗಿದೆ.

Related Articles

Back to top button