ಇನ್ನೂ ಜನನ ಪ್ರಮಾಣ ಪತ್ರವೇ ಎಲ್ಲದಕ್ಕೂ ಆಧಾರ

Views: 0
ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ- 1969 ಈ ಕಾಯ್ದೆ ಜಾರಿಗೆ ಬಂದು 54 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಿದ್ದುಪಡಿ ತರುವ ಉದ್ದೇಶದ ಮಸೂದೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಬುಧವಾರ ಮಂಡಿಸಿದೆ.
ಸರಕಾರಿ ನೌಕರಿ ನೇಮಕಾತಿ, ಚಾಲನಾ ಪರವಾನಗಿ, ಶಾಲಾ ಕಾಲೇಜುಗಳಲ್ಲಿ ಪ್ರವೇಶಕ್ಕೆ ಒಂದೇ ದಾಖಲೆಯಂತೆ ಬಳಸಲು ಉದ್ದೇಶಿತ ತಿದ್ದುಪಡಿಯಾಗಿದೆ.
ಮತದಾರರ ಪಟ್ಟಿ ಸಿದ್ಧಪಡಿಸಲು, ಆಧಾರ್ ಸಂಖ್ಯೆ ನೀಡುವಾಗ ವಿವಾಹ ನೋಂದಣಿ ಹಾಗೂ ಸಾಮಾಜಿಕ ಬದಲಾವಣೆ ತಂತ್ರಜ್ಞಾನದಲ್ಲಿನ ಪ್ರಗತಿಗೆ ತಕ್ಕಂತೆ ಈ ಕಾಯ್ದೆ ತಿದ್ದುಪಡಿ ಮೂಲಕ ನಾಗರಿಕ ಸ್ನೇಹಿಯಾಗಿಸುವ ಉದ್ದೇಶ ಹೊಂದಲಾಗಿದೆ.
ತಿದ್ದುಪಡಿ ಕಾಯ್ದೆಯಲ್ಲಿ ಏನಿದೆ? ಜನನ ಪ್ರಮಾಣ ಪತ್ರವನ್ನು ಜನಿಸಿದ ದಿನಾಂಕ ಮತ್ತು ಸ್ಥಳದ ಪುರಾವೆಯ ದಾಖಲೆ ನೀಡುವುದು.
ಜನಸಂಖ್ಯಾ ರಿಜಿಸ್ಟ್ರಾರ್, ಮತದಾರರ ಪಟ್ಟಿ,ಆಧಾರ್ ಸಂಖ್ಯೆ, ಪಡಿತರ ಚೀಟಿ, ಪಾಸ್ ಪೋರ್ಟ್, ಆಸ್ತಿ ನೋಂದಣಿ, ಹಾಗೂ ಕೇಂದ್ರ ಸರ್ಕಾರದಿಂದ ಅಧಿಸೂಚಿತ ಇತರ ಡೇಟಾಬೇಸ್ ಗಳನ್ನು ನಿರ್ವಹಿಸುವ ಪ್ರಾಧಿಕಾರಗಳಿಗೆ ಒದಗಿಸುವುದು.
ವಿಪತ್ತು ಅಥವಾ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಮರಣಗಳ ನೋಂದಣಿ ಹಾಗೂ ಮರಣ ಪ್ರಮಾಣ ಪತ್ರ ವಿತರಣೆ ಪ್ರಕ್ರಿಯೆಗೆ ಸಹಕಾರಿಯಾಗುವುದು.
ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್ ಗಳು ತೆಗೆದುಕೊಂಡ ಕ್ರಮ ಇಲ್ಲವೇ ಹೊರಡಿಸಿದ ಆದೇಶದಿಂದ ತೊಂದರೆಗೆ ಒಳಗಾಗುವ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ಒದಗಿಸಲು ಮತ್ತು ದಂಡದ ಮೊತ್ತವನ್ನು ಹೆಚ್ಚಿಸಲು ಬಹು ಉಪಯೋಗಿ ದಾಖಲೆ ಇದಾಗಿದೆ.






