ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ವಿಮಾನ ಖರೀದಿಸಿದ ಉದ್ಯಮಿ ಡಾ.ಪ್ರಕಾಶ್ ಶೆಟ್ಟಿ
Views: 79
ಕನ್ನಡ ಕರಾವಳಿ ಸುದ್ದಿ: ಎಂಆರ್‌ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿಯವರು ಖರೀದಿಸಿರುವ ಎಂಬ್ರೇಯರ್ ಲೆಗಸಿ 650 ಖಾಸಗಿ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಅಮೆರಿಕದಿಂದ ತರಿಸಲಾಗಿರುವ 14 ಆಸನಗಳ ಎಂಬ್ರೇಯರ್ ಲೆಗಸಿ 650 ಖಾಸಗಿ ವಿಮಾನವನ್ನು ಡಾ.ಕೆ.ಪ್ರಕಾಶ್ ಶೆಟ್ಟಿಯವರು ಎಂಆರ್‌ಜಿ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದಾರೆ. ಸುಮಾರು 190ಕೋಟಿ ರೂಪಾಯಿಯ ವಿಮಾನ ಇದಾಗಿದ್ದು ಎಂದು ಹೇಳಲಾಗಿದೆ. ಈ ವಿಮಾನವು ದೀರ್ಘ ದೂರದ ಪ್ರಯಾಣ ಸಾಮರ್ಥ್ಯ ಹೊಂದಿದೆ. ಜೊತೆಗೆ ಅತ್ಯಾಧುನಿಕ ಸೌಲಭ್ಯಗಳಿಗೆ ಎಂಬ್ರೇಯರ್ ಲೆಗಸಿ 650 ವಿಮಾನವು ಹೆಸರಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ವಿಮಾನಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು. ಪ್ರಕಾಶ್ ಶೆಟ್ಟಿಯವರ ಕುಟುಂಬ ಸದಸ್ಯರು, ಆಪ್ತರು ಹಾಗೂ ಹಿತೈಷಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
ಎಂಆರ್‌ಜಿ ಗ್ರೂಪ್ ನ ಡಾ. ಕೆ. ಪ್ರಕಾಶ್ ಶೆಟ್ಟಿ ಮಂಗಳೂರಿನ ಮೊದಲ ಖಾಸಗಿ ವಿಮಾನದ ಒಡೆಯರಾಗಿದ್ದಾರೆ, 190 ಕೋಟಿ ಬೆಲೆಯ ಈ ವಿಮಾನ ಹಾರಾಟಕ್ಕೆ ಗಂಟೆಗೆ ನಿರ್ವಹಣೆಗಾಗಿ 7.27 ಲಕ್ಷ ರೂಪಾಯಿ ಹಣ ಖರ್ಚಾಗುತ್ತದೆ. ದೇಶದಲ್ಲಿ ನಾವು ಮಾಡೆಲ್‌ನ 8 ವಿಮಾನ ಮಾತ್ರ ಇರೋದು!
ಕರಾವಳಿ ನಗರಿ ಮಂಗಳೂರಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ವಂತ ಖಾಸಗಿ ವಿಮಾನ ಖರೀದಿಸಿದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪ್ರಕಾಶ್ ಶೆಟ್ಟಿ ಅವರು ಸಮಾಜಮುಖಿ ಚಟುವಟಿಕೆಗಳ ಮೂಲಕವೂ ಪ್ರಸಿದ್ಧರಾಗಿದ್ದಾರೆ.






