ಇನ್ನಷ್ಟು ದುಡ್ಡು ತಂದುಕೊಡುವಂತೆ ಸೊಸೆಗೆ ಎಚ್‌ಐವಿ ಚುಚ್ಚುಮದ್ದು ನೀಡಿದ ಅತ್ತೆ-ಮಾವ!

Views: 159
ಕನ್ನಡ ಕರಾವಳಿ ಸುದ್ದಿ: ವರದಕ್ಷಿಣೆ ಎನ್ನುವ ಪೆಡಂಭೂತ ಕಾಲ ಬದಲಾದರೂ ಇಂದೂ ನಿಂತಿಲ್ಲ. ಕಾನೂನು ಏನೇ ಇದ್ದರೂ ಮಗಳು ಚೆನ್ನಾಗಿ ಇರಲಿ ಎನ್ನುವ ಕಾರಣದಿಂದ ಧನ ಪಿಶಾಚಿಗಳು ಕೇಳಿದಷ್ಟು ಹಣ ಕೊಟ್ಟು ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಆದರೆ ಇಂಥ ರಾಕ್ಷಸರು ಹಣದ ಬೇಡಿಕೆ ಒಡ್ಡಿದಾಗಲೇ ಅವರು ಎಂಥ ನೀಚ ಮನಸ್ಥಿತಿಯವರು ಎನ್ನುವ ಅರಿವು ಕೂಡ ಅಪ್ಪ-ಅಮ್ಮನಿಗೆ ಆಗದೇ ಕೊನೆಗೆ ಮಗಳ ಬಾಳನ್ನು ನರಕ ಮಾಡಿ, ಆಕೆಯನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವುದು ಮಾತ್ರ ಎಂದೆಂದಿನ ದುರಂತವೇ ಸರಿ. ಅಂಥ ಒಂದು ರಕ್ಕಸರ ಬಾಯಲ್ಲಿ ಹೋದ ಮಹಿಳೆಗೆ ಈಗ ಸಿಕ್ಕಿರುವುದು ಎಚ್ಐವಿ ಸೋಂಕು! ಎಚ್‌ಐವಿ ಸೋಂಕಿತ ಸಿರಿಂಜ್ ಚುಚ್ಚುಮದ್ದು ನೀಡಿದ್ದಾರೆ ಈ ಮಹಿಳೆಯ ಅತ್ತೆ-ಮಾವ!
ಉತ್ತರ ಪ್ರದೇಶದ ಸಹರಾನ್‌ಪುರಲ್ಲಿ ನಡೆದಿರುವ ಘಟನೆಯಿಂದ 2023ರಲ್ಲಿ ಯುವತಿಯನ್ನು ಮದುವೆ ಮಾಡಿ ಕೊಡಲಾಗಿತ್ತು. ಆಕೆಯನ್ನೇನೂ ಬರಿಗೈಯಲ್ಲಿ ಕಳಿಸಿರಲಿಲ್ಲ ಅಪ್ಪ-ಅಮ್ಮ. ಮದುವೆಗೆ ಸುಮಾರು 45 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಅಳಿಯನಿಗೆ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು 15 ಲಕ್ಷ ರೂಪಾಯಿಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು. ಆದರೆ, ಈ ರಾಕ್ಷಸರಿಗೆ ಹಣದ ದಾಹ ನಿಲ್ಲಲಿಲ್ಲ. ಮತ್ತಷ್ಟು, ಇನ್ನಷ್ಟು ದುಡ್ಡು ತಂದುಕೊಡುವಂತೆ ಸೊಸೆಯನ್ನು ಒತ್ತಾಯಿಸುತ್ತಿದ್ದರು. ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿಗಳನ್ನು ಮತ್ತು ದೊಡ್ಡ ಎಸ್‌ಯುವಿಯನ್ನು ಕೇಳಿದ್ದರು. ಅದನ್ನು ತರಲು ಸೊಸೆ ವಿಫಲಳಾದ ಕಾರಣ ಆಕೆಗೆ ಎಚ್ಐವಿ ಸೋಂಕು ಇರುವ ಇಂಜೆಕ್ಷನ್ ಚುಚ್ಚಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಗಂಡ, ಅತ್ತೆ-ಮಾವ ಸೇರಿದಂತೆ ಗಂಡನ ಮನೆಯವರ ವಿರುದ್ಧ ದೂರು ದಾಖಲಾಗಿದೆ. ಅಷ್ಟಕ್ಕೂ ಹಣ ತರುವಂತೆ ಈಕೆಯನ್ನು ಮನೆಯಿಂದ ಹೊರಕ್ಕೆ ದಬ್ಬಲಾಗಿತ್ತು. ತವರಿಗೆ ಬಂದಾಕೆಗೆ ಬುದ್ಧಿಮಾತು ಹೇಳಿ ವಾಪಸ್ ಕಳುಹಿಸಲಾಗಿತ್ತು. ಆಮೇಲೆ ಆದದ್ದು ಮಾತ್ರ ಘೋರ ದುರಂತ!
ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವರದಕ್ಷಿಣೆ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.