ಆರು ದಶಕಗಳ ಹಿಂದೆ ಪ್ರೀತಿಸಿ ಓಡಿ ಹೋಗಿದ್ದ ಜೋಡಿಗೆ ಮಕ್ಕಳು, ಮೊಮ್ಮಕ್ಕಳು ಸೇರಿ ವಿವಾಹ ವಾರ್ಷಿಕೋತ್ಸವ!

Views: 145
ಕನ್ನಡ ಕರಾವಳಿ ಸುದ್ದಿ: 64 ವರ್ಷದ ಹಿಂದೆ ಓಡಿ ಹೋಗಿದ್ದ ಜೋಡಿಗೆ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಮಕ್ಕಳು, ಮೊಮ್ಮಕ್ಕಳು ಆಚರಿಸಿದ್ದಾರೆ.
ಗುಜರಾತ್ ಮೂಲದ ಹರ್ಷ್ ಹಾಗೂ ಮೃದು ಇಬ್ಬರು ಶಾಲೆಯಲ್ಲಿ ಓದುತ್ತಿರುವಾಗಲೇ 1960ರಲ್ಲಿ ಪ್ರೇಮಾಂಕುರವಾಗಿತ್ತು.ಪರಸ್ಪರ ಪತ್ರಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿಗೆ ಹೋಗಿತ್ತು. ಮೊದಲಿನಿಂದಲೂ ಭಾರತದಲ್ಲಿ ಅಂತರ್ಜಾತಿ ವಿವಾಹಕ್ಕೆ ಕುಟುಂಬಗಳು ಒಪ್ಪುವುದೇ ಇಲ್ಲ. ಅದರಂತೆ ಹರ್ಷ್ ಹಾಗೂ ಮೃದು ಜೀವನದಲ್ಲೂ ಆಗಿತ್ತು.
ಹರ್ಷ್ ಅವರು ಜೈನ್ ಸಮುದಾಯಕ್ಕೆ ಸೇರಿದ್ರೆ, ಮೃದು ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಹೀಗಾಗಿ ಅಂತರ್ಜಾತಿ ಮದುವೆ ಎಂದಾಕ್ಷಣ ಮನೆಯಲ್ಲಿ ಗೊಂದಲ ಏರ್ಪಟ್ಟಿತ್ತು. ಈ ಮದುವೆಗೆ ಮೃದು ಅವರ ಮನೆಯಲ್ಲಿ ಒಪ್ಪಿಗೆ ಕೊಡಲೇ ಇಲ್ಲ. ಇದರಿಂದ ಇಬ್ಬರು ಹೃದಯ ಒಡೆದು ಹೋದಂತೆ ಆಗಿತ್ತು. ನಂತರ ಲವ್ಬರ್ಡ್ಸ್ ಇಬ್ಬರು ಸೇರಿ ಒಂದು ನಿರ್ಧಾರಕ್ಕೆ ಬಂದ್ದಿದ್ದರು. ಕುಟುಂಬನ್ನು ಬಿಟ್ಟು ಪ್ರೀತಿಯನ್ನೇ ಅಲಂಕರಿಸಿದರು. ಒಂದು ಗಟ್ಟಿ ನಿರ್ಧಾರ ಮಾಡಿ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು.
ಎರಡು ಕಡೆಯ ಕುಟುಂಬದ ಬೆಂಬಲ ಇಲ್ಲದೇ ಜೀವನದಲ್ಲಿ ದಂಪತಿ ಎನ್ನುವ ಬದುಕಿನಲ್ಲಿ ಯಶಸ್ಸು ಗಳಿಸಿದರು. ದಿನ ಕಳೆದಂತೆ ಇಬ್ಬರ ನಡುವಿನ ಬಿಟ್ಟಿರಲಾರದ ಸಂಬಂಧವನ್ನು ಗುರುತಿಸಿದ ಎರಡು ಕುಟುಂಬಗಳು ಕ್ರಮೇಣ ಅವರನ್ನು ಸ್ವೀಕರಿಸಿದರು.
1960ರಲ್ಲಿ ಪ್ರೀತಿಗಾಗಿ ಹರ್ಷ್ ಹಾಗೂ ಮೃದು ಮಾಡಿದ್ದ ಧೈರ್ಯ, ಸಾಹಸ, ತ್ಯಾಗ ಎಲ್ಲವನ್ನು ಮೆಚ್ಚಿಕೊಂಡ ಅವರ ಮೊಮ್ಮಕ್ಕಳು ಈಗ ಅವರಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅವರು ಅಂದು ಓಡಿ ಹೋಗಿದ್ದ ದಿನದಂದೇ ಈಗ 64ನೇ ವಿವಾಹ ವಾರ್ಷಿಕೋತ್ಸವ ಏರ್ಪಡಿಸಿದ್ದಾರೆ. ಅಲ್ಲದೇ ಈ ವಿವಾಹ ವಾರ್ಷಿಕೋತ್ಸವದಲ್ಲೇ ಮೃದು, ಹರ್ಷ್ಗೆ ಗೊತ್ತಿಲ್ಲದೇ ವಿವಾಹ ಸಮಾರಂಭ ಏರ್ಪಡಿಸಿ 80 ವರ್ಷದ ಹಿರಿಯ ದಂಪತಿಗೆ ಅಂದಿನ ದಿನಗಳಿಗೆ ಕರೆದುಕೊಂಡು ಹೋಗಿದ್ದಾರೆ.
ಹರ್ಷ್- ಮೃದು ಅವರ ಪೋಷಕರು, ಹಿರಿಯರು ಅಂದು ಮಾಡಿದ್ದ ತಪ್ಪನ್ನು ಇಂದು ಮೊಮ್ಮಕ್ಕಳು ಸರಿ ಪಡಿಸಿದ್ದಾರೆ ಎನ್ನಬಹುದು. 64ನೇ ವಿವಾಹ ವಾರ್ಷಿಕೋತ್ಸವದಲ್ಲಿ ಏರ್ಪಡಿಸಿದ್ದ ಮದುವೆ ಸಮಾರಂಭವೂ ಹರ್ಷ್ ಹಾಗೂ ಮೃದು ಇಬ್ಬರು ಯೌವನದಲ್ಲಿ ತಪ್ಪಿಸಿಕೊಂಡ ಎಲ್ಲ ಆಚರಣೆ, ಸಂಪ್ರದಾಯಗಳನ್ನು ಒಳಗೊಂಡಿರುವುದು ವಿಶೇಷ ಎನಿಸಿತ್ತು.