ಅಮೃತಧಾರೆ ಸೀರಿಯಲ್ ನಟಿ ಸಾರಾ ಹೊಸ ಅವತಾರಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್!

Views: 143
ಕನ್ನಡ ಕರಾವಳಿ ಸುದ್ದಿ: ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದ ನಟಿ ಸಾರಾ ಅಣ್ಣಯ್ಯ ಅವರು ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ದಿವಾನ್ ಎನ್ನುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ.
ಇದೀಗ ನಟಿ ಸಾರಾ ಅಣ್ಣಯ್ಯ ಹಸಿ ಬಿಸಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕೆಲವರು ನೀವು ಹೀಗೆ ಇದ್ದರೆ ನಮಗೆ ಇಷ್ಟ ಆಗೋದಿಲ್ಲ ಸಾರಾ, ಯಾವಾಗಲೂ ನಿಮ್ಮನ್ನು ಸೀರೆಯಲ್ಲಿ ನೋಡಲು ಇಷ್ಟ ಪಡುತ್ತೇವೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ಇನ್ನೂ ನಟಿ ಸಾರಾ ಅಣ್ಣಯ್ಯ ಕನ್ನಡತಿ ಸೀರಿಯಲ್ ಬಳಿಕ ಅಮೃತಧಾರೆಯಲ್ಲಿ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದ ಮೊದಲು ನೆಗೆಟಿವ್ ಶೇಡ್ನಲ್ಲಿದ್ದ ಪಾತ್ರ ಬಳಿಕ ಪಾಸಿಟಿವ್ಗೆ ಬದಲಾಗಿತ್ತು.
ಅಲ್ಲಿಯೂ ಕೂಡ ಮಹಿಮಾ ಪಾತ್ರದ ಮೂಲಕ ನಟಿ ಫೇಮಸ್ ಆದರು. ಆದರೆ ಸುಮಾರು ಮೂರು ತಿಂಗಳುಗಳಿಂದ ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಳ್ಳುತ್ತಲೇ ಇಲ್ಲ, ಹಾಗಾಗಿ ವೀಕ್ಷಕರು ಸಾರಾ ಅಣ್ಣಯ್ಯ ಅವರು ಸೀರಿಯಲ್ನಿಂದ ಆಚೆ ಬಂದು ಬಿಟ್ರಾ ಅಂತ ಅಭಿಮಾನಿಗಳು ಆತಂಕ ಪಡುತ್ತಿದ್ದಾರೆ.